ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಪ್ರತಿಭಟನೆ
Update: 2021-06-08 21:20 IST
ಉಡುಪಿ, ಜೂ.8: ಫ್ಯಾಸಿಸ್ಟ್ ಅಜೆಂಡಾದ ಭಾಗವಾಗಿ ಕರ್ನಾಟಕದಲ್ಲಿ ತರಾ ತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಕಣ್ಣಂಗಾರ್, ಮುಳೂರು, ಕಾಪು, ಉಡುಪಿ, ಬ್ರಹ್ಮಾವರ ದಲ್ಲಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಕಾರ್ಯದರ್ಶಿ ಮಸೂದ್ ಮನ್ನಾ, ಸದಸ್ಯರಾದ ಅರ್ಫಾಝ್, ನಝ್ಹತ್, ಆವೆಝ್, ಅಫ್ತಾಬ್ ಮೊದಲಾದವರು ಉಪಸ್ಥಿತರಿದ್ದರು.