ಯಕ್ಷಗಾನ ಮೇಳ ನಡೆಸುವ ದೇವಸ್ಥಾನಗಳಿಂದಲೇ ಕಲಾವಿದರಿಗೆ ಪೂರ್ಣ ಸಂಬಳ: ಸಚಿವ ಕೋಟ

Update: 2021-06-08 15:52 GMT

ಕುಂದಾಪುರ ಜೂ.8: ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಶಕ್ತಿ ಇದ್ದರೆ ಕಲಾ ವಿದರಿಗೆ ಪೂರ್ಣ ಸಂಬಳ ಕೊಡಲು ಸರಕಾರ ಆದೇಶ ನೀಡಿದೆ ಎಂದು ಸಚಿವ ೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ತಲ್ಲೂರು ಗ್ರಾಪಂನಲ್ಲಿ ಇಂದು ವಿಶೇಷ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲ ಕ್ರೋಢೀಕರಿಸಿ ಕಲಾವಿದರಿಗೆ ಪೂರ್ಣಾವಧಿಯ ಸಂಭಾವನೆ ಕೊಡುವಂತೆ ತಿಳಿಸಿದ್ದೇನೆ. ಕೆಲವು ದೇವಸ್ಥಾನಗಳು ಕಲಾವಿದರ ಬಳಿ ಒಪ್ಪಂದ ಮಾಡಿಕೊಳ್ಳು ವಾಗಲೇ ಮಧ್ಯದಲ್ಲೇ ಆಟ ನಿಂತರೆ, ಸಂಭಾವನೆ ಕಡಿತಗೊಳಿಸಲು ಬದ್ಧರಾಗಿ ದ್ದೇವೆ ಎಂದು ಹೇಳಿದ್ದಾರೆ ಎಂದರು.

ಸಮುದಾಯ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾಸ್ಪತ್ರೆಯ ಮೂಲಕ ಲಸಿಕೆ ಹಂಚಿಕೆ ಮಾಡಲಾಗಿದೆ. ಗ್ರಾಪಂ ಅಧ್ಯಕ್ಷರು ಸದಸ್ಯರುಗಳು ಕೊರೋನಾ ವಾರಿಯರ್ಸ್‌ ವ್ಯಾಪ್ತಿಗೆ ಬರುವಂತೆ ಮನವಿ ಮಾಡಿದ್ದೇನೆ. ಪತ್ರಕರ್ತರೂ ಸೇರಿದಂತೆ ಅನೇಕ ಕೊರೋನಾ ವಾರಿಯರ್ಸ್ ವ್ಯಾಪ್ತಿಯೊಳಗೆ ಬರುವವರಿಗೆ ಆದ್ಯತೆ ನೀಡಿ ಲಸಿಕೆ ಕೊಡುವಂತೆ ತಿಳಿಸಲಾಗಿದೆ ಎಂದರು.

ಲಸಿಕೆ ಹಂಚಿಕೆ ಪಾರದರ್ಶಕವಾಗಿರಬೇಕು ಎಂದು ಆರೋಗ್ಯ ಇಲಾಖೆಗೆ ಈಗಾಗಲೇ ಸ್ಪಷ್ಟವಾಗಿ ಸೂಚಿಸಲಾಗಿದೆ. ಯಾವುದೇ ಪಕ್ಷದವರಾ ದರೂ, ಬಡವ ರಾದರೂ ಎಲ್ಲರೂ ನಮ್ಮವರೇ. ಎಲ್ಲೂ ತಪ್ಪುಗಳಾಗಬಾರದು ಮತ್ತು ಎಚ್ಚರದಿಂದ ನಿಭಾಯಿಸಲು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಾಬು ಹೆಗ್ಡೆ, ಬೈಂದೂರು ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಸದಸ್ಯೆ ಕರಣ್ ಪೂಜಾರಿ, ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News