ಸ್ಕೂಟಿ ಢಿಕ್ಕಿ: ಬೈಕ್ ಸವಾರನಿಗೆ ಗಾಯ
Update: 2021-06-08 21:34 IST
ಬಂಟ್ವಾಳ, ಜೂ.8: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕನ್ಯಾನ ಸಂಕದ ಬಳಿ ಸಂಭವಿಸಿದೆ.
ಕನ್ಯಾನ ದಿಲ್ ದಾರ್ ಹೊಟೇಲ್ ಮಾಲಕ ಇಬ್ರಾಹೀಂ ಅವರು ಕನ್ಯಾನ ಪೇಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಸ್ಕೂಟಿ ಇಬ್ರಾಹೀಂ ಅವರ ಬೈಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಇಬ್ರಾಹೀಂ ಅವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.