ಅಲ್ಝೈಮರ್ ಕಾಯಿಲೆಯ ಹೊಸ ಔಷಧಿಗೆ ಅಮೆರಿಕ ಶರತ್ತುಬದ್ಧ ಅನುಮೋದನೆ

Update: 2021-06-08 16:32 GMT

ವಾಶಿಂಗ್ಟನ್, ಜೂ. 8: ಮೆದುಳಿನ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಅಲ್ಝೈಮರ್ಸ್ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುವ ನೂತನ ಔಷಧ ‘ಅಡುಹೆಲ್ಮ್’ಗೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ಸೋಮವಾರ ಅಂಗೀಕಾರ ನೀಡಿದೆ.

ಇದು 2003ರ ಬಳಿಕ ಈ ರೋಗಕ್ಕೆ ಅಮೆರಿಕದಲ್ಲಿ ಅಂಗೀಕಾರ ಪಡೆದ ಮೊದಲ ಔಷಧವಾಗಿದೆ.

ಈ ಔಷಧದಿಂದ ನಿರೀಕ್ಷಿತ ವೈದ್ಯಕೀಯ ಪ್ರಯೋಜನ ಲಭಿಸಿದೆಯೇ ಎನ್ನುವ ಸಮೀಕ್ಷೆಗೆ ಬಳಿಕ ಅದು ಒಳಪಡಬೇಕಾಗುತ್ತದೆ. ನಿರೀಕ್ಷಿತ ಪ್ರಯೋಜನ ಕಂಡುಬರದಿದ್ದರೆ ಔಷಧವನ್ನು ಇಲಾಖೆಯು ವಾಪಸ್ ಪಡೆದುಕೊಳ್ಳಬಹುದಾಗಿದೆ.

ಅಲ್ಝೈಮರ್ ಕಾಯಿಲೆಯು ನಿಧಾನವಾಗಿ ವ್ಯಾಪಿಸುವ ಮೆದುಳಿನ ಕಾಯಿಲೆಯಾಗಿದೆ. ಅದು ನಿಧಾನವಾಗಿ ನೆನಪು ಮತ್ತು ಯೋಚಿಸುವ ಕೌಶಲವನ್ನು ನಾಶಪಡಿಸುತ್ತದೆ ಹಾಗೂ ಬಳಿಕ ಸಣ್ಣ ಕೆಲಸಗಳನ್ನೂ ಮಾಡುವ ರೋಗಿಯ ಸಾಮರ್ಥ್ಯವನ್ನು ಕಿತ್ತುಕೊಳ್ಳುತ್ತದೆ.
ಜಗತ್ತಿನಲ್ಲಿ ಸುಮಾರು 60 ಲಕ್ಷ ಮಂದಿ ಅಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News