×
Ad

ಒಟಿಪಿ ನಂಬರ್ ಪಡೆದು ವಂಚನೆ : ದೂರು

Update: 2021-06-08 21:45 IST

ಮಂಗಳೂರು, ಜೂ.8: ಕ್ರೆಡಿಟ್ ಕಾರ್ಡ್‌ನ ಮೊತ್ತ ಹೆಚ್ಚಿಸುತ್ತೇವೆ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ ಒಟಿಪಿ ನಂಬರ್ ಪಡೆದು 29,900 ರೂ. ವಂಚಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್‌ಬಿಎಲ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವ ಖಾತೆದಾರರಿಗೆ ಜೂ.3ರಂದು ಪೂ.11.34 ರಿಂದ 1.52ರ ಅವಧಿಯಲ್ಲಿ ಆರ್‌ಬಿಎಲ್ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿದ ಅಪರಿಚಿತನು ‘ನಿಮ್ಮ ಕ್ರೆಡಿಟ್ ಕಾರ್ಡ್ ಮೊತ್ತ ಹೆಚ್ಚಿಸುತೇವೆ’ ಎಂದಿದ್ದಾನೆ. ಅದನ್ನು ನಂಬಿದ ಖಾತೆದಾರರು ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು ಮೊಬೈಲ್‌ಗೆ ಬಂದ ಒಟಿಪಿ ನಂಬರ್ ನೀಡಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಕ್ರೆಡಿಟ್ ಕಾರ್ಡ್‌ನಿಂದ 29,900ರೂ. ಖಾಲಿಯಾಗಿದೆ.

ಅಪರಿಚಿತ ವ್ಯಕ್ತಿಯ ಮಾತು ಕೇಳಿ ತಾನು ಮೋಸಹೋಗಿರುವ ಬಗ್ಗೆ ಮನವರಿಕೆಯಾದ ಬಳಿಕ ಖಾತೆದಾರರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News