×
Ad

ಕಿರುಕುಳ ಆರೋಪ: ಪತಿ, ಮತ್ತಾತನ ಮನೆಯವರ ವಿರುದ್ಧ ಮಹಿಳಾ ಠಾಣೆಗೆ ದೂರು

Update: 2021-06-08 21:47 IST

ಮಂಗಳೂರು, ಜೂ.8: ಪತಿ, ಮತ್ತಾತನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿವಾಹಿತೆಯೊಬ್ಬರು ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

‘ಮುಹಮ್ಮದ್ ಅಶ್ರಫ್‌ರೊಂದಿಗೆ 2013ರ ಎ.14ರಂದು ಗುರುಪುರದ ಮೆಗಾ ಪ್ಲಾಝಾ ಹಾಲ್‌ನಲ್ಲಿ ತನ್ನ ಮದುವೆಯಾಗಿದೆ. ಮದುವೆಯಾದ 2 ತಿಂಗಳ ಬಳಿಕ ಪತಿ ವಿದೇಶಕ್ಕೆ ಹೋಗಿದ್ದು, ತಾನು ಪತಿಯ ಮನೆಯಲ್ಲೇ ವಾಸವಾಗಿದ್ದೆ. ಈ ವೇಳೆ ಪತಿಯ ಮನೆಯವರು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆಂದು ವಿವಾಹಿತೆ ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಗಂಡನೂ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಅಲ್ಲದೆ 2 ತಿಂಗಳು ಗರ್ಭಿಣಿಯಾಗಿ ದ್ದಾಗ ಮನೆಯಿಂದ ಹೊರ ಹಾಕಿದ್ದು, ಆ ಬಳಿಕ ತಾನು ತಾಯಿಯ ಮನೆಯಲ್ಲೇ ವಾಸವಾಗಿದ್ದೇನೆ. ತಾನು ಗಂಡನ ಮನೆಗೆ ಹೋದಾಗ ಮಾವ, ಅತ್ತೆ, ಪತಿಯ ಅಕ್ಕ ಮತ್ತು ತಮ್ಮ ನನ್ನನ್ನು ನಿಂದಿಸಿ ಮನೆ ಪ್ರವೇಶಿಸಲು ಬಿಡುತ್ತಿರಲಿಲ್ಲ ಎಂದು ವಿವಾಹಿತೆ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News