×
Ad

ಬಾಲಕಿ ನಾಪತ್ತೆ: ದೂರು

Update: 2021-06-08 22:01 IST

ಕೊಣಾಜೆ : ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ಬಳಿಯ ಬಾಲಕಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮೀನಾಕ್ಷಿ ಎಂಬವರು ಕೊಣಾಜೆ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ.

ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ ಕುಮಾರಿ ದೀಕ್ಷಾ (17) ಎಂಬಾಕೆಯೇ ನಾಪತ್ತೆಯಾದ ಬಾಲಕಿಯಾಗಿದ್ದು, ದ್ವಿತೀಯ ಪಿಯುಸಿಯಲ್ಲಿ ಓದುವ ವಿದ್ಯಾರ್ಥಿನಿಯಾಗಿದ್ದಾಳೆ.

ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ  ಒಬ್ಬಳೇ ಮನೆಯಲ್ಲಿದ್ದವಳು ನಾಪತ್ತೆಯಾಗಿದ್ದಾಳೆ. ದೀಕ್ಷಾ ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ತಾಯಿ ಪ್ರಶ್ನಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಾಲಕಿ ನಾಪತ್ತೆಯಾಗಿರಬಹುದು‌ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News