ಅಗ್ರ 50 ವಿವಿಗಳಲ್ಲಿ ಗುರುತಿಸಿಕೊಂಡ ಯೆನೆಪೊಯ ವಿವಿ

Update: 2021-06-08 17:30 GMT

ಕೊಣಾಜೆ, ಜೂ.8: ಯೆನೆಪೊಯ(ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯವು SCIMAGO ಸಂಸ್ಥೆಗಳ ಶ್ರೇಯಾಂಕ- 2021ರಲ್ಲಿ ಭಾರತದ ಅಗ್ರ 50 ವಿಶ್ವವಿದ್ಯಾನಿಲಯಗಳಲ್ಲಿ ಗುರುತಿಸಲ್ಪಟ್ಟಿದೆ ಎಂದು ಯೆನೆಪೋಯ ವಿವಿ ಪ್ರಕಟನೆ ತಿಳಿಸಿದೆ.
SCIMAGO  ಸಂಸ್ಥೆಗಳ ಶ್ರೇಯಾಂಕವು ವಿಶ್ವಾದ್ಯಂತ ವಿಶ್ವವಿದ್ಯಾನಿಲಯಗಳ ವಿಜ್ಞಾನ ಮತ್ತು ಸಂಶಧನಾ ಕೇಂದ್ರಿತ ಸಂಸ್ಥೆಗಳ ಮೌಲ್ಯಮಾಪನ ಆಧಾರಿತವಾಗಿದ್ದು, ಸಂಶೋಧನಾ ಕಾರ್ಯಕ್ಷಮತೆ, ಸಂಶೋಧನೆಯಲ್ಲಿ ಹೊಸತನ, ಸಂಶೋಧನೆಗೆ ಸಾಮಾಜಿಕ ಪ್ರಭಾವದ ಆಧಾರದ ಮೇಲೆ ಸ್ಥಾನ ನೀಡಲಾಗುವುದು ಹಾಗೂ SCOPUS ಅಂಕಿ-ಅಂಶಗಳ ಮಾಹಿತಿಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ.

ಭಾರತೀಯ ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿಭಾಗದ ಅಡಿಯಲ್ಲಿ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯವು 22ನೇ ಸ್ಥಾನದಲ್ಲಿದೆ. ಹೊಸತನ ಸಂಶೋಧನಾ ವಿಭಾಗದಲ್ಲಿ 63ನೇ ಸ್ಥಾನ, ಸಂಶೋಧನಾ ಸಾಮಾಜಿಕ ಪ್ರಭಾವದಲ್ಲಿ 26ನೇ ಸ್ಥಾನ ಹಾಗೂ ಒಟ್ಟು ಶ್ರೇಯಾಂಕದಲ್ಲಿ 49ನೇ ಸ್ಥಾನ ಪಡೆದಿದೆ.

ಇತ್ತೀಚೆಗೆ ವಿಶ್ವವಿದ್ಯಾನಿಲಯ ವಿಭಾಗದಲ್ಲಿ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯವು  NIRF 2020 ಶ್ರೇಯಾಂಕದಲ್ಲಿ 86ನೇ ಸ್ಥಾನ ಹಾಗೂ ದೇಶದ ಉನ್ನತ ದಂತ ಕಾಲೇಜುಗಳಲ್ಲಿ ಯೆನೆಪೊಯ ದಂತ ಕಾಲೇಜು  NIRF 2020 ಶ್ರೇಯಾಂಕದಲ್ಲಿ 20ನೇ ಸ್ಥಾನ ಪಡೆದಿತ್ತು.

ಜಾಗತಿಕ ಉನ್ನತ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕೂಡ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯವು ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News