ಬ್ರಹ್ಮಾವರ ಹೋಬಳಿಯ ಫ್ಲೈಯಿಂಗ್ ಸ್ಕ್ವಾಡ್ ಬದಲಾವಣೆ
Update: 2021-06-08 23:10 IST
ಉಡುಪಿ, ಜೂ.8: ಸರಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಬ್ರಹ್ಮಾವರ ಹೋಬಳಿಯ ನೀಲಾವರ, ಉಪ್ಪೂರು, ವಾರಂಬಳ್ಳಿ, ಬೈಕಾಡಿ, ಹಾರಾಡಿ, ಚಾಂತಾರು, 52 ಹೇರೂರು, ಹಾವಂಜೆ, ಮಟಪಾಡಿ, ಹಂದಾಡಿ ಹಾಗೂ ಕುಮ್ರಗೋಡು ವ್ಯಾಪ್ತಿಗೆ ನೇಮಿಸಲಾದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜಗದೀಶ್ ಭಟ್ ರನ್ನು ಬದಲಾವಣೆ ಮಾಡಿ, ನಗರದ ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಿರೀಶ ಕೆ.ಪಿ (ಮೊ.ನಂ: 8073524387) ಇವರನ್ನು ನೇಮಕ ಮಾಡಿ, ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.