ರೆಡ್‌ಕ್ರಾಸ್‌ನಿಂದ ಜಿಲ್ಲಾಸ್ಪತ್ರೆಗೆ ಬಿಪಾಪ್ ಸಿಸ್ಟಮ್ ಯಂತ್ರ ಹಸ್ತಾಂತರ

Update: 2021-06-09 12:55 GMT

ಉಡುಪಿ, ಜೂ.9: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಬಿಪಾಪ್ ಸಿಸ್ಟಮ್ ಯಂತ್ರವನ್ನು ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ಅವರಿಗೆ ನಿನ್ನೆ ಹಸ್ತಾಂತರಿಸಲಾಯಿತು.

ರೆಡ್‌ಕ್ರಾಸ್ ಜಿಲ್ಲಾ ಶಾಖೆಯಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಈ ಯಂತ್ರದೊಂದಿಗೆ 50 ಪಿಪಿ ಕಿಟ್, ಆಕ್ಸಿಮೀಟರ್, ಟಾರ್ಪಲ್‌ಗಳನ್ನು ಸಹ ನೀಡಲಾಯಿತು. ಮುಂದಿನ ದಿನಗಳಲ್ಲಿ ಎರಡು ವೆಂಟಿಲೇಟರ್, ಚಂಡಮಾರುತದ ಸಂದರ್ಭದಲ್ಲಿ ಸಂತ್ರಸ್ಥರಿಗೆ ಅಗತ್ಯವಿರುವ ಕಿಚನ್ ಕಿಟ್ ನೀಡಲಿರುವುದಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.

ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕೆ.ಜಯರಾಂ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News