×
Ad

ನಿಯಮ ಅನುಸರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು: ಕೇಂದ್ರ ಸರಕಾರಕ್ಕೆ ಟ್ವಿಟರ್ ಪತ್ರ

Update: 2021-06-09 20:23 IST

ಹೊಸದಿಲ್ಲಿ: ಹೊಸ ಡಿಜಿಟಲ್ ನಿಯಮಗಳನ್ನು ಪಾಲಿಸಲು "ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಟ್ವಿಟರ್ ಇಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ ಹಾಗೂ  ಒಂದು ವಾರದಲ್ಲಿ ಭಾರತಕ್ಕೆ ಅಗತ್ಯವಿರುವ ಕೆಲವು ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದೆ.

ಗುತ್ತಿಗೆ ಆಧಾರದಲ್ಲಿ ನೋಡಲ್ ಹಾಗೂ  ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಿದೆ ಹಾಗೂ  ಮುಖ್ಯ ಪಾಲನ ಅಧಿಕಾರಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ಟ್ವಿಟರ್ ತಿಳಿಸಿದೆ.

"ಈ ನಿಯಮಗಳ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಹಾಗೂ  ಭಾರತದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಸೇರಿದಂತೆ ಮಾರ್ಗಸೂಚಿಗಳನ್ನು ಅನುಸರಿಸಲು ಬಲವಾದ ನಂಬಿಕೆಯಿಂದ ಪ್ರಯತ್ನಿಸಿದ್ದೇವೆ. ಮಾರ್ಗಸೂಚಿಗಳನ್ನು ಫೆಬ್ರವರಿ 25 ರಂದು ತಿಳಿಸಲಾಯಿತು ಮತ್ತು ಸಾಂಕ್ರಾಮಿಕ ರೋಗದ ಜಾಗತಿಕ ಪ್ರಭಾವವು ನಮಗೆ ನಿಗದಿತ ಸಮಯದೊಳಗೆ ಮಾರ್ಗಸೂಚಿಗಳನ್ನು ಅನುಸರಿಸಲು ಅಗತ್ಯವಾದ ಕೆಲವು ವ್ಯವಸ್ಥೆಗಳನ್ನು ಮಾಡಲು ಹೆಚ್ಚು ಕಷ್ಟಕರವಾಗಿದೆ'' ಎಂದು ಟ್ವಿಟರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News