ಕೋವಿಡ್19: ಉಡುಪಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ 14.66ಕ್ಕೆ ಇಳಿಕೆ

Update: 2021-06-09 15:44 GMT

ಉಡುಪಿ, ಜೂ.9: ಕಳೆದ ಐದು ದಿನಗಳ ಕೋವಿಡ್-19ರ ಪಾಸಿಟಿವಿಟಿ ಪ್ರಮಾಣ ಜೂ.8ರಂದು ಶೇ.14.66ಕ್ಕೆ ಇಳಿದಿದೆ ಎಂದು ಕರ್ನಾಟಕ ಕೋವಿಡ್ ವಾರ್ ರೂಮಿನ ದೈನಂದಿನ ವರದಿಯಲ್ಲಿ ತಿಳಿಸಲಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ಪಾಸಿಟಿವಿಟಿ ಪ್ರಮಾಣ 9.76ರಲ್ಲಿದೆ ಎಂದು ವರದಿ ತಿಳಿಸಿದೆ.

ಸದ್ಯ ದಕ್ಷಿಣ ಕನ್ನಡದ ಪಾಸಿಟಿವಿಟಿ ಪ್ರಮಾಣ ಶೇ.19.04 ಆಗಿದ್ದರೆ, ಉತ್ತರ ಕನ್ನಡ ಸಾಕಷ್ಟು ಪ್ರಗತಿ ತೋರಿದ್ದು ಅದರ ಪಾಸಿಟಿವಿಟಿ ಪ್ರಮಾಣ 19ರಿಂದ 14.48ಕ್ಕೆ ಇಳಿದಿದೆ. ಸದ್ಯ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ.25.2 ಪಾಸಿಟಿವಿಟಿ ರೇಟ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ.

ದಾವಣಗೆರೆ (24.4), ಮೈಸೂರು (22.49), ಚಾಮರಾಜನಗರ (19.68) ನಂತರ ಸ್ಥಾನಗಳಲ್ಲಿವೆ. ಜೂ.8ರ ವರದಿಯಂತೆ ಹಿಂದಿನ ಐದು ದಿನಗಳ ಕೊಡಗಿನ ಪಾಸಿಟಿವಿಟಿ ಪ್ರಮಾಣ ಶೇ.19.09 ಆಗಿದೆ.

ರಾಜ್ಯದಲ್ಲೀಗ ಬೆಂಗಳೂರು ನಗರ ಸೇರಿದಂತೆ ಒಟ್ಟು ಐದು ಜಿಲ್ಲೆಗಳ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕೆಳಕ್ಕಿದಿದೆ. ಬೆಂಗಳೂರು ನಗರದ ಪಾಸಿಟಿವಿಟಿ ಶೇ.4.80 ಆಗಿದೆ. ಉಳಿದಂತೆ ಯಾದಗಿರಿ ಶೇ.5, ಹಾವೇರಿ ಶೇ.3.28, ಕಲಬುರ್ಗಿ ಶೇ.2.80 ಹಾಗೂ ಬೀದರ್ ಶೇ.0.67ರಷ್ಟಿದ್ದು, ಈ ಜಿಲ್ಲೆಗಳಲ್ಲಿ ಶೀಘ್ರವೇ ಲಾಕ್‌ಡೌನ್ ರಿಯಾಯಿತಿಯನ್ನು ಘೋಷಿಸುವ ನಿರೀಕ್ಷೆ ಇದೆ.

ಈಗಲೂ 30ರಿಂದ 39 ವರ್ಷದೊಳಗಿನವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. 20ರಿಂದ 29 ವಯೋಮಾನದವರು ಎರಡನೇ, 40ರಿಂದ 49 ವಯೋಮಾನದವರು ಮೂರನೇ ಸ್ಥಾನದಲ್ಲಿದ್ದಾರೆ. 50ರಿಂದ 59, 60ರಿಂದ 69, 10ರಿಂದ 19ವಯೋಮಾನದವರು ನಂತರದ ಸ್ಥಾನಗಳ ಲ್ಲಿದ್ದಾರೆ ಎಂದು ಈ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News