ಪ್ರಧಾನಿ ಭೇಟಿಯಾಗಿ 45 ನಿಮಿಷ ಚರ್ಚಿಸಿದ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ

Update: 2021-06-09 15:22 GMT

ಹೊಸದಿಲ್ಲಿ: ಬಿಜೆಪಿ ಮುಖಂಡ ಹಾಗೂ ಪಶ್ಚಿಮಬಂಗಾಳದ ಶಾಸಕ ಸುವೇಂದು ಅಧಿಕಾರಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನುಭೇಟಿಯಾದರು.

ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ನೇಮಕಗೊಂಡಿರುವ ಸುವೇಂದು ಅಧಿಕಾರಿ ಪ್ರಧಾನಿ ಮೋದಿ  ಭೇಟಿಯಾಗಿ ಹಲವು ರಾಜಕೀಯ ವಿಚಾರಗಳ  ಕುರಿತಾಗಿ 45 ನಿಮಿಷಗಳ ಕಾಲ ಚರ್ಚಿಸಿದರು.

ಸುವೇಂದು ಅಧಿಕಾರಿ ಪಿಎಂ ಮೋದಿಯವರನ್ನು ಭೇಟಿಯಾಗುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಧರ್ಮೇಂದ್ರ ಪ್ರಧಾನ್ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮಂಗಳವಾರ ಭೇಟಿಯಾಗಿದ್ದರು.

ಸುವೇಂದು ನಂದಿಗ್ರಾಮ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸುವೇಂದು ಚುನಾವಣೆಗೆ ಮೊದಲು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು.

ಪಶ್ಚಿಮಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರನ್ನು ನಾನು ಇಂದು ಭೇಟಿಯಾಗಿರುವೆ ಎಂದು ಟ್ವೀಟಿಸಿರುವ ಪ್ರಧಾನಮಂತ್ರಿ, ಅಧಿಕಾರಿಯನ್ನುಭೇಟಿಯಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News