ಒಂದೇ ಹೆರಿಗೆಯಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ: ಹೊಸ ದಾಖಲೆ ನಿರ್ಮಾಣ

Update: 2021-06-10 04:26 GMT

photo: twitter(@Black__12Women)

ಜೊಹಾನ್ಸ್ ಬರ್ಗ್, ಜೂ. 9: ದಕ್ಷಿಣ ಆಫ್ರಿಕದ ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರು ಮಾಲಿ ದೇಶದ ಹಲೀಮಾ ಸಿಸ್ಸೆಯ ದಾಖಲೆಯನ್ನು ಮುರಿದಿದ್ದಾರೆ. ಹಲೀಮಾ ಕಳೆದ ತಿಂಗಳು ಮೊರೊಕ್ಕೊ ದೇಶದಲ್ಲಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ್ದರು.

ತಾನು 8 ಮಕ್ಕಳಿಗೆ ಜನ್ಮ ನೀಡಲಿದ್ದೇನೆ ಎಂಬುದಾಗಿ 37 ವರ್ಷದ ಗೋಸಿಯಮೆ ತಮರ ಸಿತೋಲ್ ಭಾವಿಸಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ. ಆದರೆ, ಸೋಮವಾರ ರಾತ್ರಿ ಅವರು ನಿರೀಕ್ಷಿಸಿದ್ದಕ್ಕಿಂತ ಎರಡು ಹೆಚ್ಚು ಮಕ್ಕಳಿಗೆ, ಅಂದರೆ 10 ಮಕ್ಕಳಿಗೆ ಜನ್ಮ ನೀಡಿದರು. ಸ್ಕ್ಯಾನಿಂಗ್ ನಲ್ಲಿ 8 ಶಿಶುಗಳು ಪತ್ತೆಯಾಗಿದ್ದವು.

‘‘ಏಳು ಗಂಡು ಮತ್ತು ಮೂರು ಹೆಣ್ಣು ಮಕ್ಕಳು. ಗರ್ಭಧಾರಣೆಯ ಏಳು ತಿಂಗಳು ಮತ್ತು 7 ದಿನಗಳಲ್ಲಿ ಹೆರಿಗೆಯಾಗಿದೆ’’ ಎಂದು ಮಹಿಳೆಯ ಗಂಡ ಟೆಬೊಹೊ ಸೊಟೆಸಿ ‘ಪ್ರಿಟೋರಿಯ ನ್ಯೂಸ್’ಗೆ ಹೇಳಿದ್ದಾರೆ. ದಂಪತಿಗೆ ಈಗಾಗಲೇ ಆರು ವರ್ಷ ಪ್ರಾಯದ ಅವಳಿ ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News