ಉಡುಪಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಆಹಾರ ಕಿಟ್ ವಿತರಣೆ
Update: 2021-06-09 23:15 IST
ಉಡುಪಿ, ಜೂ.9: ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಹೀರೆಬೆಟ್ಟು ಅಂಬೇಡ್ಕರ್ ಕಾಲನಿ, ಆತ್ರಾಡಿ, ಮಣಿಪಾಲ ಹೊಸ ಬೆಳಕು ಆಶ್ರಮಗಳಿಗೆ ಆಹಾರ ಕಿಟ್‌ಗಳನ್ನು ಇಂದು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ತಾಪಂ ಮಾಜಿ ಸದಸ್ಯ ಗುರುದಾಸ್ ಭಂಡಾರಿ, ರಾಜ್ಯ ಸಂಯೋಜಕ ಯಾಸೀನ್ ಹೆಮ್ಮಾಡಿ, ಹಸನ್ ಮಣಿಪುರ, ಫಾರೂಕು ಚಂದ್ರನಗರ, ಶರ್ಫುದ್ದೀನ್ ಮಜೂರು, ಅಬ್ದುಲ್ ಗಫೂರ್ ಅಜೆಕಾರು, ಅಬ್ದುಲ್ ಖಾದರ್, ಶೇಕ್ ಅಹ್ಮದ್, ಗ್ರಾಪಂ ಸದಸ್ಯ ಸುರೇಶ್ ನಾಕ್, ಸುಧೀರ್ ನಾಯಕ್, ಯತೀಶ್ ಶೆಟ್ಟಿ, ಕವಿತಾ, ಮುಹಮ್ಮದ್ ರಫೀಕ್, ಹಾರೂನ್ ರಶೀದ್, ಅಬ್ದುಲ್ ಸಮದ್, ದಾನೀಶ್ ಮುಹಮ್ಮ್, ಅಶೋಕ್ ನಾರಿ ಉಪಸ್ಥಿತರಿದ್ದರು.