×
Ad

ಲಿಂಗ ಸಮಾನತೆ,ಸ್ವಚ್ಛ ನೀರು ಪೂರೈಕೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿ ಕನಿಷ್ಠ

Update: 2021-06-10 20:31 IST

ಹೊಸದಿಲ್ಲಿ,ಜೂ.10: ನೀತಿ ಆಯೋಗವು ನಿಗದಿಗೊಳಿಸಿದ್ದ 16 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಎಂಟು ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಜಧಾನಿ ದಿಲ್ಲಿಯು ಎರಡನೇ ಸ್ಥಾನವನ್ನು ಗಳಿಸಿದೆ. ಆದರೆ ಲಿಂಗ ಸಮಾನತೆ ಮತ್ತು ಸ್ವಚ್ಛ ನೀರಿನ ವಿಷಯಗಳಲ್ಲಿ ಅದು ಕನಿಷ್ಠ ಅಂಕಗಳನ್ನು ಗಳಿಸಿದೆ ಎಂದು ನೀತಿ ಆಯೋಗದ ವಾರ್ಷಿಕ ವರದಿಯು ತಿಳಿಸಿದೆ.

ಕಳೆದ ವರ್ಷ ಸರಾಸರಿ 60 ಅಂಕಗಳನ್ನು ಗಳಿಸಿದ್ದ ದಿಲ್ಲಿ ಈ ವರ್ಷ ತನ್ನ ಗಳಿಕೆಯನ್ನು 68 ಅಂಕಗಳಿಗೆ ಹೆಚ್ಚಿಸಿಕೊಂಡಿದೆ. ಇದಕ್ಕೆ ಹೋಲಿಸಿದರೆ ರಾಷ್ಟ್ರೀಯ ಸರಾಸರಿಯು 66 ರಷ್ಟಿದೆ.

ಬಡತನ ನಿರ್ಮೂಲನೆ (81 ಅಂಕ),ಉತ್ತಮ ಆರೋಗ್ಯ ಮತ್ತು ಸ್ವಾಸ್ಥ (90),ಅಗ್ಗದ ಮತ್ತು ಸ್ವಚ್ಛ ಶಕ್ತಿ (100) ಮತ್ತು ಭೂಮಿಯಲ್ಲಿನ ಬದುಕು (81) ಈ ವಿಷಯಗಳಲ್ಲಿ ದಿಲ್ಲಿಯು ಮುಂಚೂಣಿಯಲ್ಲಿದೆ. ಆದರೆ ಲಿಂಗ ಸಮಾನತೆ (33), ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ (50) ಹಾಗೂ ಸ್ವಚ್ಛ ನೀರು ಮತ್ತು ನೈರ್ಮಲ್ಯ (61) ಈ ವಿಷಯಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕನಿಷ್ಠ ಸ್ಥಾನದಲ್ಲಿದೆ ಎಂದು ವರದಿಯು ತಿಳಿಸಿದೆ.
ಕಳೆದ ವರ್ಷ ಕೈಗಾರಿಕೆ,ವಿನೂತನತೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ನೂರರ ಸಾಧನೆ ಮಾಡಿದ್ದ ದಿಲ್ಲಿ ಈ ವರ್ಷ 60ಕ್ಕೆ ಕುಸಿದಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಸರಾಸರಿಯು 55ರಷ್ಟಿದೆ.

ಶಿಕ್ಷಣ ಕ್ಷೇತ್ರದಲ್ಲಿ ದಿಲ್ಲಿಯ ಸಾಧನೆ ಉತ್ತಮವಾಗಿದೆ. 2020ನೇ ಸಾಲಿನಲ್ಲಿ ಸತತ ಐದನೇ ವರ್ಷ ದಿಲ್ಲಿಯ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಶೇಕಡಾವಾರು ಉತ್ತೀರ್ಣತೆಯನ್ನು ದಾಖಲಿಸಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News