ಮಲ್ಪೆ: ಅಪಘಾತಕ್ಕೊಳಗಾದ ರಿಕ್ಷಾ ಚಾಲಕನಿಗೆ ನೆರವು
Update: 2021-06-10 21:33 IST
ಮಲ್ಪೆ, ಜೂ.10: ಅಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಮಲ್ಪೆ ಇದರ ವತಿಯಿಂದ ಆಕಸ್ಮಿಕ ಅವಘಡದಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ದುಡಿಯಲು ಅಸಕ್ತರಾದ ಸಂಘದ ಸದಸ್ಯ ಜೆನಿತ್ ಪಾಲನ್ ಅವರಿಗೆ 42ಸಾವಿರ ರೂ. ಸಹಾಯ ಧನ ಮತ್ತು 25 ಕೆಜಿ ಅಕ್ಕಿಯನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷ ಹರೀಶ್ ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಮಲ್ಪೆ, ಕೋಶಾಧಿಕಾರಿ ದೀಪಕ್ ಕ್ರಿಷ್ಟೋಪರ್, ಮಾಜಿ ಅಧ್ಯಕ್ಷ ಸದಾಶಿವ ಬೈಲಕೆರೆ, ಕಮಿಟಿ ಸದಸ್ಯರುಗಳಾದ ಸುರೇಂದ್ರ ತೊಟ್ಟಂ, ಲೀಲಾಧರ್, ರೋಶನ್ ಮಲ್ಪೆ, ಪುರಂದರ್, ಶಿವರಾಜ್ ನೆರ್ಗಿ, ಮನೋಜ್ ಕೊಡವೂರು ಸದಸ್ಯರುಗಳಾದ ಸಂಜಿತ್ ಮತ್ತು ಸುರೇಶ್ ಉಪಸ್ಥಿತರಿದ್ದರು.