ಬದಲಾದ ಎಸೆಸೆಲ್ಸಿ ಪರೀಕ್ಷಾ ಪದ್ದತಿ: ಉಡುಪಿ ಜಿಲ್ಲೆಯಲ್ಲಿ 26 ಹೊಸ ಕೇಂದ್ರಗಳ ರಚನೆ

Update: 2021-06-10 16:29 GMT

ಉಡುಪಿ, ಜೂ.10: ಕೋವಿಡ್ ಭೀತಿಯ ಮಧ್ಯೆ ಬದಲಾದ ಎಸೆಸೆಲ್ಸಿ ಪರೀಕ್ಷಾ ಪದ್ದತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 289 ಪ್ರೌಢ ಶಾಲೆಗಳಿಂದ ಒಟ್ಟು 14,380 ಮಕ್ಕಳು ಪರೀಕ್ಷೆ ಬರೆಯಲಿದ್ದು, ಈ ಸಂಬಂಧ ಒಟ್ಟು 77 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ.

ಈ ಮೊದಲು 51 ಕೇಂದ್ರಗಳಿದ್ದು, ಈಗ 26 ಹೊಸ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೇಂದ್ರದಲ್ಲಿ ಒಂದು ಮೀಸಲು ಕೊಠಡಿ ಇರುತ್ತದೆ.

ಜಿಲ್ಲೆಯಲ್ಲಿ ರೆಗ್ಯುಲರ್ ಅಭ್ಯರ್ಥಿಗಳು ಒಟ್ಟು 13336, ಖಾಸಗಿ ಅಭ್ಯರ್ಥಿ 204, ರೆಗ್ಯುಲರ್ ರಿಪಿಟರ್ 657, ಖಾಸಗಿ ರಿಪಿಟರ್ 183 ಮತ್ತು ಬ್ರಹ್ಮಾವರ ವಲಯದಲ್ಲಿ ರೆಗ್ಯುಲರ್ ಅಭ್ಯರ್ಥಿಗಳು 2717, ಖಾಸಗಿ ಅಭ್ಯರ್ಥಿ 16, ರೆಗ್ಯುಲರ್ ರಿಪಿಟರ್ 113 ಸೇರಿದಂತೆ ಒಟ್ಟು 2859, ಬೈಂದೂರು ವಲಯದಲ್ಲಿ ರೆಗ್ಯುಲರ್ 2038, ಖಾಸಗಿ 32, ರೆಗ್ಯುಲರ್ ರಿಪಿಟರ್ 93 ಖಾಸಗಿ ರಿಪಿಟರ್ 19 ಸೇರಿದಂತೆ ಒಟ್ಟು 2182, ಕಾರ್ಕಳ ವಲಯದಲ್ಲಿ ರೆಗ್ಯುಲರ್ 2617, ಖಾಸಗಿ 33, ರೆಗ್ಯುಲರ್ ರಿಪಿಟರ್ 130, ಖಾಸಗಿ ರಿಪಿಟರ್ 32 ಸೇರಿದಂತೆ ಒಟ್ಟು 2812, ಕುಂದಾಪುರ ವಲಯದಲ್ಲಿ ರೆಗ್ಯುಲರ್ 2626, ಖಾಸಗಿ 52, ರೆಗ್ಯುಲರ್ ರಿಪಿಟರ್ 95, ಖಾಸಗಿ ರಿಪಿಟರ್ 47 ಸೇರಿದಂತೆ ಒಟ್ಟು 2820, ಉಡುಪಿ ವಲಯದಲ್ಲಿ ರೆಗ್ಯುಲರ್ 3338, ಖಾಸಗಿ 71, ರೆಗ್ಯುಲರ್ ರಿಪಿಟರ್ 226, ಖಾಸಗಿ ರಿಪಿಟರ್ 74 ಸೇರಿದಂತೆ ಒಟ್ಟು 3709 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಫೋನ್ ಇನ್ ಕಾರ್ಯಕ್ರಮ: ಜೂ.15ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ರವರೆಗೆ ಡಿಡಿಪಿಐ ಅಧ್ಯಕ್ಷತೆಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿ ಪಾಲಕರಿಗೆ, ಮಕ್ಕಳಿಗೆ ಈ ಪರೀಕ್ಷೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಫೋನ್‌ಇನ್ ಸಂಪರ್ಕ ಸಂಖ್ಯೆ: ಎನ್.ಎಚ್.ನಾಗೂರ- 9448999353, ಡಾ.ಅಶೋಕ ಕಾಮತ್ -94803 45947, ಜಾಹ್ನವಿ- 9449470414, ಎ.ಕೆ. ನಾಗೇಂದ್ರಪ್ಪ- 94806 95376, ಓ.ಆರ್.ಪ್ರಕಾಶ್- 9480695375, ಯೋಗನರಸಿಂಹ ಮೂರ್ತಿ - 96636 69708.

ವಿವಿಧ ಕಾರ್ಯಕ್ರಮಗಳು: ಶಾಲಾವಾರು ವಿಷಯವಾರು ವಾಟ್ಸಪ್ ಗ್ರೂಪ್‌ಗಳನ್ನು ಬದಲಾಗಿರುವ ಪರೀಕ್ಷಾ ಪದ್ದತಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಈ ಮೂಲಕ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪ್ರಾಕ್ಟೀಸ್ ಮಾಡಿಸಲಾಗುತ್ತಿದೆ.
ಬದಲಾಗಿರುವ ಪರೀಕ್ಷಾ ಪದ್ದತಿ ಆಧರಿಸಿ ಆನ್‌ಲೈನ್ ಮೂಲಕ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಲಾಗುತತಿದೆ. ಪ್ರತಿ ಎರಡು ದಿನಕ್ಕೆ ಒಂದು ದಿನ ವಿಷವಾರು ಗೂಗಲ್ ಮೀಟ್‌ಮಾಡಿ ಅವರ ಕಲಿಕಾ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ.

ತಾಲೂಕು ಹಂತದಲ್ಲಿ ಗೂಗಲ್ ಮೀಟ್ ಮೂಲಕ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಮತುತಿ ಶಿಕ್ಷಕರಿಗೆ ಬದಲಾಗಿರುವ ಪರೀಕ್ಷಾ ಪದ್ದತಿ ಕುರಿತು ತಿಳಿಸಲಾಗುತಿತಿದೆ. ಜಿಲ್ಲಾ ಹಂತದಲ್ಲಿ ಡಿಡಿಪಿಐ ಹಾಗೂ ಎಲ್ಲ ಬಿಇಒ ಮತುತಿ ಮೇಲ್ವಿಚಾರಣಾ ಅಧಿಕಾರಿಗಳ ಗೂಗಲ್ ಮೀಟ್ ಮಾಡಿ ಬದಲಾಗಿರುವ ಪರೀಕ್ಷಾ ಪದ್ದತಿ ಬಗ್ಗೆ ತಿಳಿಸಲಾಗಿದೆ ಎಂದು ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದ್ದಾರೆ.

ಜಿಲ್ಲೆಯ ಹೊಸ ಪರೀಕ್ಷಾ ಕೇಂದ್ರಗಳು

ಬ್ರಹ್ಮಾವರ- ನಿರ್ಮಲಾ ಪ್ರೌಢ ಶಾಲೆ, ಬ್ರಹ್ಮಾವರ, ವೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ, ಕರ್ನಾಟಕ ಪಬ್ಲಿಕ್ ಶಾಲೆ, ಕೊಕ್ಕರ್ಣೆ. ಬೈಂದೂರು- ಎಚ್.ಎಂ.ಎಂ.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ, ಬೈಂದೂರು, ತೌಹೀದ ಆಂಗ್ಲ ಮಾಧ್ಯಮ ಶಾಲೆ, ಶಿರೂರು, ಸಂದೀಪನ್ ಅಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ, ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ, ಮಾವಿನಕಟ್ಟೆ, ಗ್ರಗರಿ ಪ್ರೌಢ ಶಾಲೆ, ನಾಡ.

ಕಾರ್ಕಳ- ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಾರ್ಕಳ, ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ, ಗಣಿತನಗರ ಕುಕ್ಕಂದೂರು, ಕರ್ನಾಟಕ ಪಬ್ಲಿಕ್ ಶಾಲೆ, ಹೊಸಮಾರು, ಸಂತ ಜೋಷೆಫ್ ಪ್ರೌಢ ಶಾಲೆ, ಬೆಳ್ಮಣ್, ಜ್ಯೋತಿ ಪ್ರೌಢ ಶಾಲೆ, ಅಜೆಕಾರು, ಸರಕಾರಿ ಪದವಿ ಕಾಲೇಜು ಹೆಬ್ರಿ.

ಕುಂದಾಪುರ- ಸರಕಾರಿ ಪ.ಪೂ.ಕಾಲೇಜು ತೆಕ್ಕಟ್ಟೆ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಿದ್ದಾಪುರ, ಮದರ್‌ಥೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಶಂಕರನಾರಾಯಣ, ಶಾರದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಸ್ರೂರು, ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ (ಖಾಸಗಿ ಅಭ್ಯರ್ಥಿ ಕೇಂದ್ರ).
 ಉಡುಪಿ- ಸರಕಾರಿ ಪ.ಪೂ.ಕಾಲೇಜು, ಉಡುಪಿ, ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂಜಿಬೆಟ್ಟು, ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮೂಳೂರು, ದಂಡತೀರ್ಥ ಆಂಗ್ಲ ಮಾಧ್ಯಯ ಪ್ರೌಢ ಶಾಲೆ, ಉಳಿಯಾರಗೋಳಿ, ಕಾಪು, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉದ್ಯಾವರ, ಸೈಂಟ್ ಜೋನ್ಸ್ ಪ್ರೌಢ ಶಾಲೆ, ಶಂಕರಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News