​ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆ

Update: 2021-06-10 16:45 GMT

ಮಂಗಳೂರು, ಜೂ.10 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ) ಸಂಸ್ಥೆಯ ವತಿಯಿಂದ ಏಳನೇ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಿಂದ ರಾಜ್ಯ ಮಟ್ಟದ ಯೋಗ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಾಥಮಿಕ ಶಾಲಾ ವಿಭಾಗದಿಂದ ‘ಮಕ್ಕಳಿಗೆ ಯೋಗದ ಅಗತ್ಯತೆ’, ಪ್ರೌಢಶಾಲಾ ವಿಭಾಗದಿಂದ ‘ಆರೋಗ್ಯ ಕಾಪಾಡುವಲ್ಲಿ ಯೋಗದ ಅಗತ್ಯತೆ’, ಕಾಲೇಜು ವಿಭಾಗದಿಂದ ‘ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಯುವಜನತೆ ಮತ್ತು ಯೋಗ’ ಹಾಗೂ ಸಾರ್ವಜನಿಕ ವಿಭಾಗದಿಂದ ‘ಸುಂದರ ಬದುಕಿಗೆ ಯೋಗದ ಆವಶ್ಯಕತೆ’ ವಿಷಯದಲ್ಲಿ ಸ್ಪರ್ಧೆ ಆಹ್ವಾನಿಸಲಾಗಿದೆ.

ಸ್ಪರ್ಧಾಳುಗಳು ಜನ್ಮ ದಿನಾಂಕದ ದೃಢೀಕರಣ ಸಲ್ಲಿಸಬೇಕು. ಪ್ರತಿ ವಿಭಾಗದಲ್ಲಿ ಮೂರು ನಗದು ಬಹುಮಾನ ಹಾಗೂ ಪ್ರಮಾಣಪತ್ರ ನಿಗದಿಪಡಿಸಲಾಗಿದೆ. ಪ್ರಾಥಮಿಕ ವಿಭಾಗದಲ್ಲಿ ಪ್ರಥಮ 2,000 ರೂ, ದ್ವಿತೀಯ 1,500 ರೂ, ತೃತೀಯ 1,000 ರೂ, ಪ್ರೌಢಶಾಲಾ ವಿಭಾಗದಲ್ಲಿ 3,000 ರೂ, 2,500 ರೂ ಮತ್ತು 2,000 ರೂ, ಕಾಲೇಜು ವಿಭಾಗದಲ್ಲಿ 3,500 ರೂ, 3,000 ರೂ, 2500 ರೂ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪ್ರಥಮ 4,000 ರೂ, ದ್ವಿತೀಯ 3,500 ರೂ, ತೃತೀಯ 3,000 ರೂ ನಿಗದಿಪಡಿಸಲಾಗಿದದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.

ಪ್ರಬಂಧದ ಪ್ರತಿ ಪುಟದಲ್ಲಿ ಹೆಸರು, ಊರು, ದೂರವಾಣಿ ಸಂಖ್ಯೆ ಹಾಗೂ ಸ್ಪರ್ಧಾ ವಿಭಾಗ ನಮೂದಿಸತಕ್ಕದ್ದು. ‘ಎ4’ ಗಾತ್ರದ ಪೇಪರ್‌ನಲ್ಲಿ ಎರಡು ಪುಟ ಮೀರದಂತೆ ಕನ್ನಡ ಭಾಷೆಯಲ್ಲಿ ಪ್ರಬಂಧ ಬರೆದು ಜೂ.17ರ ಗುರುವಾರ ಸಂಜೆ 5 ಗಂಟೆಯೊಳಗೆ ಪ್ರಾಥಮಿಕ ವಿಭಾಗ (5-7ನೇ ತರಗತಿ) ವಿಶ್ವನಾಥ (9740138308), ಪ್ರೌಢ ವಿಭಾಗ (8-10 ತರಗತಿ) ಬಾಲಕೃಷ್ಣ (9901474771), ಕಾಲೇಜು ವಿಭಾಗ-ಶೇಖರ ಕಡ್ತಲ(9480487081), ಸಾರ್ವಜನಿಕ ವಿಭಾಗ ಸಂಜೀವ(9480146703) ಇವರಿಗೆ ವಾಟ್ಸಾಪ್ ಮೂಲಕ ಕಳಹಿಸಿಕೊಡಬೇಕಾಗಿ ಟ್ರಸ್ಟ್‌ನ ನಿರ್ದೇಶಕ ಡಾ. ಐ. ಶಶಿಕಾಂತ ಜೈನ್ ಹಾಗೂ ಟ್ರಸ್ಟ್ ಕಾರ್ಯದರ್ಶಿ ಬಿ ಸೀತಾರಾಮ ತೋಳ್ಪಡಿತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News