ಬಡತನ ಕಡಿಮೆ ಮಾಡಲು ಯೋಗ್ಯ ಕುಟುಂಬ ಯೋಜನೆ ಅಳವಡಿಸಿಕೊಳ್ಳಿ: ಮುಸ್ಲಿಮರಿಗೆ ಅಸ್ಸಾಂ ಸಿಎಂ ಸಲಹೆ

Update: 2021-06-10 18:33 GMT

ಗುವಾಹಟಿ: ಬಡತನ ಹಾಗೂ  ಇತರ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು 'ಯೋಗ್ಯ ಕುಟುಂಬ ಯೋಜನೆ' ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ರಾಜ್ಯದ ಮುಸ್ಲಿಂ ಸಮುದಾಯವನ್ನು ಕೇಳಿಕೊಂಡಿದ್ದಾರೆ ಎಂದು Hindustan Times ವರದಿ ಮಾಡಿದೆ.

"ಜನಸಂಖ್ಯೆಯನ್ನು ನಿಯಂತ್ರಿಸಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ" ಎಂದು ಅವರು ಹೇಳಿದರು.

ಅಸ್ಸಾಂ ಸರಕಾರ  30 ದಿನಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ ಅವರು "ಬಡತನ, ಭೂ ಅತಿಕ್ರಮಣ ಮುಂತಾದ ಸಮಸ್ಯೆಗಳಿಗೆ ಮೂಲ ಕಾರಣ ಅನಿಯಂತ್ರಿತ ಜನಸಂಖ್ಯೆಯ ಬೆಳವಣಿಗೆ. ಮುಸ್ಲಿಂ ಸಮುದಾಯವು ಯೋಗ್ಯವಾದ ಕುಟುಂಬ ಯೋಜನೆ ಯನ್ನು  ಅಳವಡಿಸಿಕೊಂಡರೆ ನಾವು ಅಸ್ಸಾಂನಲ್ಲಿ ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಕೊನೆಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News