ಅಮೆರಿಕ: ಕಿರಾಣಿ ಅಂಗಡಿಯಲ್ಲಿ ಗುಂಡು ಹಾರಾಟ; 3 ಸಾವು

Update: 2021-06-11 18:38 GMT

ಮಯಾಮಿ (ಅಮೆರಿಕ), ಜೂ. 11: ಅಮೆರಿಕದ ಫ್ರೋ‌ ರಾಜ್ಯದ ಕಿರಾಣಿ ಅಂಗಡಿಯೊಂದರಲ್ಲಿ ಗುರುವಾರ ಒಂದು ಮಗು ಸೇರಿದಂತೆ ಮೂವರನ್ನು ಗುಂಡಿಟ್ಟು ಕೊಲ್ಲಲಾಗಿದೆ.

ಮಯಾಮಿ ನಗರದಿಂದ ಉತ್ತರಕ್ಕೆ ಸುಮಾರು 130 ಕಿಲೋ ಮೀಟರ್ ದೂರದ ರಾಯಲ್ ಪಾಮ್ ಬೀಚ್ನಲ್ಲಿರುವ ಪಬ್ಲಿಕ್ಸ್ ಕಿರಾಣಿ ಅಂಗಡಿಯಲ್ಲಿ ಗುಂಡಿನ ಹಾರಾಟ ನಡೆದಿದೆ.

‘‘ಸ್ಥಳಕ್ಕೆ ಬಂದಾಗ ಗುಂಡಿನ ಗಾಯಗಳಿಂದಾಗಿ ಮೂವರು ಮೃತಪಟ್ಟಿದ್ದರು. ಓರ್ವ ಪುರುಷ, ಓರ್ವ ಮಹಿಳೆ ಮತ್ತು ಒಂದು ಮಗು’’ ಎಂದು ಪಾಮ್ ಬೀಚ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. ‘‘ಮೃತರಲ್ಲಿ ದಾಳಿಕೋರನೂ ಸೇರಿದ್ದಾನೆ’’ ಎಂದರು.

ಕಳೆದ ರವಿವಾರ ಮಯಾಮಿಯಲ್ಲಿ ನಡೆದ ಇನ್ನೊಂದು ಗುಂಡು ಹಾರಾಟದಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News