ಯೂರೊ 2020 ಅಭಿಯಾನಕ್ಕೆ ಚಾಲನೆ

Update: 2021-06-12 05:15 GMT

ರೋಮ್ : ಟರ್ಕಿ ವಿರುದ್ಧ 3-0 ಗೋಲುಗಳ ಭರ್ಜರಿ ಜಯದ ಮೂಲಕ ಇಟಲಿ ಯೂರೊ 2020 ಅಭಿಯಾನಕ್ಕೆ ಚಾಲನೆ ನೀಡಿದೆ. ಮುಂದೂಡಲ್ಪಟ್ಟ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಎದುರು ಇಟಲಿ ಗಮನಾರ್ಹ ಪ್ರದರ್ಶನ ನೀಡಿತು.

2018ರ ವಿಶ್ವಕಪ್‌ಗೆ ಅರ್ಹತೆ ಗಳಿಸಲು ವಿಫಲವಾದ ಬಳಿಕ ಕಳೆದ ಐದು ವರ್ಷದಲ್ಲಿ ಪ್ರಮುಖ ಟೂರ್ನಿಯನ್ನು ಆಡಿದ ಇಟಲಿ ಪರ ಎಲ್ಲ ಗೋಲುಗಳು ಎರಡನೇ ಅವಧಿಯಲ್ಲಿ ಬಂದವು. ಕೋವಿಡ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಸ್ಟ್ಯಾಡಿಯೊ ಒಲಿಂಪಿಕೊದ ಪೂರ್ಣ ಆಸನ ಸಾಮರ್ಥ್ಯದ ನಾಲ್ಕನೇ ಒಂದರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಸಿರೊ ಇಮ್ಮೊಬೈಲ್ ಮತ್ತು ಲೊರೆನ್ಸೊ ಇನ್‌ಸೈನ್ ಅವರು ಗ್ರೂಪ್ ಎ ಆರಂಭಿಕ ಪಂದ್ಯದಲ್ಲಿ ರಾಬರ್ಟೊ ಮ್ಯಾನ್ಸಿನಿ ತಂಡದ ಪರವಾಗಿ ಮೆರಿಹ್ ಡೆಮಿರಲ್ ಗೋಲಿನ ಖಾತೆ ತೆರೆದರು. "ರೋಮ್‌ನಲ್ಲಿ ಉತ್ತಮ ಆರಂಭ ಅತ್ಯಂತ ಪ್ರಮುಖ. ಇದು ಇಟಲಿಯನ್ನರಿಗೆ ಮತ್ತು ಸಾರ್ವಜನಿಕರಿಗೆ ತೃಪ್ತಿಯ ಕ್ಷಣ ಎನ್ನುವುದು ನನ್ನ ಭಾವನೆ" ಎಂದು ಮ್ಯಾನ್ಸಿನಿ ಭಾವುಕರಾಗಿ ನುಡಿದರು. ಇಟಲಿ ಸದ್ಯ 28 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ.

"ಪ್ರೇಕ್ಷಕರಿಂದ ದೊಡ್ಡ ಮಟ್ಟದ ನೆರವು ಸಿಕ್ಕಿತು. ಇದು ಸುಂದರ ಸಂಜೆ. ಇಂಥ ಹಲವು ಸಂಜೆಗಳ ನಿರೀಕ್ಷೆಗಳಲ್ಲಿ ನಾವಿದ್ದೇವೆ. ಆದರೆ ವೆಂಬ್ಲಿ ಹಾದಿಯಲ್ಲಿ ಇನ್ನೂ ಆರು ಪಂದ್ಯಗಳಿವೆ" ಎಂದು ಹೇಳಿದರು. "ನಾವು ಭಿನ್ನ ಫಲಿತಾಂಶ ನಿರೀಕ್ಷಿಸಿದ್ದೆವು. ಆದರೆ ಇಟಲಿ ಪ್ರಬಲವಾಗಿತ್ತು" ಎಂದು ಟರ್ಕಿ ಕೋಚ್ ಸೆನೋಲ್ ಗ್ಯೂನ್ಸ್ ಹೇಳಿದರು.

ಎರಡನೇ ಅವಧಿಯ ಮೊದಲ ಗೋಲು ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ನಾವು ಪಂದ್ಯದ ನಿಯಂತ್ರಣ ಕಳೆದುಕೊಂಡೆವು ಎಂದು ಅವರು ಒಪ್ಪಿಕೊಂಡರು. ಒಂದು ತಿಂಗಳ ಅವಧಿಯ 24 ತಂಡಗಳ ಈ ಟೂರ್ನಿಯನ್ನು 11 ದೇಶಗಳಲ್ಲಿ ಆಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News