ಪುತ್ತೂರು: 'ಗದ್ದೆಗೆ ಇಳಿಯೋಣ ಬನ್ನಿ' ಆಂದೋಲನಕ್ಕೆ ಶಾಸಕರಿಂದ ಚಾಲನೆ
ಪುತ್ತೂರು: ತಾಲೂಕಿನಲ್ಲಿ ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯಾದ "ಗದ್ದೆಗೆ ಇಳಿಯೋಣ ಬನ್ನಿ" ಆಂದೋಲನಕ್ಕೆ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಕೆ.ಪಿ.ಎಸ್ ಶಾಲೆಯ ಆಟದ ಮೈದಾನದಲ್ಲಿ ಶನಿವಾರ ಚಾಲನೆ ನೀಡಿದರು.
ಇಲ್ಲಿ ಸುಮಾರು ಎರಡು ಎಕ್ರೆ ವಿಸ್ತೀರ್ಣದ ಆಟದ ಮೈದಾನವನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ವಿಶಾಲವಾದ ಆಟದ ಮೈದಾನ ಮಳೆಗಾಲದಲ್ಲಿ ಕ್ರೀಡೆಗೆ ಬಳಸದೇ ಇರುವ ಕಾರಣ ಈ ಬಾರಿ ಮೈದಾನದಲ್ಲಿ ಭತ್ತ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಧರ್ಮಸ್ಥಳ ಸ್ವಸಹಾಯ ಸಂಘದ ಕುಂಬ್ರ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಕುಂಬ್ರ ಕೆ.ಪಿ.ಎಸ್ ಶಾಲೆಯ ಕಾರ್ಯಾಧ್ಯಕ್ಷರಾದ ನಿತೀಶ್ ಕುಮಾರ್ ಶಾಂತಿವನ, ವಕೀಲ ದುರ್ಗಾ ಪ್ರಸಾದ್ ರೈ ಕುಂಬ್ರ, ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.