ಜನವಿರೋಧಿ ಸರ್ಕಾರ ದೇಶ ಮತ್ತು ರಾಜ್ಯವನ್ನು ಆಳುತ್ತಿದೆ: ಸಂತೋಷ್ ನಾಯ್ಕ ಆರೋಪ

Update: 2021-06-12 07:20 GMT

ಭಟ್ಕಳ : ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 7ವರ್ಷಗಳಿಂದ ಜನ ವಿರೋಧಿ ಆಡಳಿತ ನಡೆಸುತ್ತಿದ್ದು ಜನರ ಮೇಲೆ ಬೆಲೆ ಏರಿಕೆಯ ಬರೆಯನ್ನು ಹಾಕುತ್ತಿದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ ಆರೋಪಿಸಿದ್ದಾರೆ.

ಅವರು ಶನಿವಾರ ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರೋದಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕ ಮಾಂಕಾಳ್ ವೈದ್ಯ ಮಾತನಾಡಿ, ದೇಶವನ್ನು ಆಳುತ್ತಿರುವವರು ಜನರಪರ ಯೋಜನೆಗಳು ರೂಪಿಸಬೇಕು ಹೊರತು ಜನರಿಗೆ ಹೊರೆಯನ್ನು ಹೊರಿಸುವುದಲ್ಲ. ಆದ್ದರಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಜನರು ಬದುಕು ರೀತಿಯಲ್ಲಿ ಏರುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಿ ಅಗತ್ಯವಸ್ತುಗಳ ಬೆಲೆಗಳನ್ನು ಇಳಿಸುವಂತೆ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸುತ್ತ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಮಾಜಿ ಶಾಸಕರುಗಳಾದ ಮಾಂಕಾಳ್ ವೈದ್ಯ, ಜೆ ಡಿ ನಾಯ್ಕ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಶ್ರೀ ಮೊಗೇರ್, ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಾಧಾ ವೈಧ್ಯ, ಸದಸ್ಯ ವಿಷ್ಣು ದೇವಾಡಿಗ, ಮೀನಾಕ್ಷಿ ನಾಯ್ಕ್, ನಾರಾಯಣ ನಾಯ್ಕ್, ಮುಖಂಡ ರಾದ ಭಾಸ್ಕರ್ ನಾಯ್ಕ್, ಎ ಪಿ ಎಂ ಸಿ ಅಧ್ಯಕ್ಷ ಗೋಪಾಲ ನಾಯ್ಕ್, ಸತೀಶ್ ಆಚಾರಿ, ದೇವಿದಾಸ್ ಆಚಾರಿ, ಜಟ್ಟಪ್ಪ ನಾಯ್ಕ್, ಗಣಪತಿ ನಾಯ್ಕ್ ತಲಾನ್, ವೆಂಕಟ್ರಮಣ ನಾಯ್ಕ್, ರಮೇಶ್ ನಾಯ್ಕ್, ಹರ್ಷ ಮಂಜುನಾಥ್ ನಾಯ್ಕ್, ಸಂತೋಷ ನಾಯ್ಕ್ ಅಲ್ವೇಕೋಡಿ, ದುರ್ಗಾದಾಸ್ ಮೊಗೇರ, ಪುರಸಭೆ ಸದಸ್ಯ ಅಬ್ದುಲ್ ರವೂಫ್ ನಾಯ್ತೆ,  ಮಾರುಕೇರಿ ಪಂಚಾಯತ್ ಅಧ್ಯಕ್ಷ ಮಾಸ್ತಿ ಗೊಂಡ, ಸದಸ್ಯರಾದ ನಾಗವೇಣಿ ಗೊಂಡ, ಸೋಮಶೇಖರ್ ನಾಯ್ಕ್, ಅಲ್ಪ ಸಂಖ್ಯಾ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಖೈಸರ್ ಮೊಹತೇಶಮ್, ಮುಟ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸಲೀಮ್, ಮುಖಂಡರಾದ ಫೌಝಾನ್, ಮುಂತಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News