×
Ad

ಆಹಾರದ ಕಿಟ್ ಒದಗಿಸಲು ಎಂಆರ್‌ಪಿಎಲ್‌ಗೆ ಜೋಕಟ್ಟೆ ಗ್ರಾ.ಪಂ. ಮನವಿ

Update: 2021-06-12 13:45 IST

ಮಂಗಳೂರು, ಜೂ. 12: ಕೊರೋನ ಲಾಕ್‌ಡೌನ್‌ನಿಂದ ಜನರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದು, ಎಂಆರ್‌ಪಿಎಲ್ ತನ್ನ ಸಿಎಸ್‌ಆರ್ ನಿಧಿಯಿಂದ ತೋಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಒದಗಿಸುವಂತೆ ಒತ್ತಾಯಿಸಿ ಜೋಕಟ್ಟೆ ಗ್ರಾ.ಪಂ. ಮನವಿ ಸಲ್ಲಿಸಿದೆ.

ಜೋಕಟ್ಟೆ ಗ್ರಾಮ ಪಂಚಾಯ್‌ನಿಂದ ಎಂಆರ್‌ಪಿಎಲ್‌ಗೆ ಸಲ್ಲಿಸಲಾಗಿರುವ ಈ ಮನವಿಯಲ್ಲಿ, ಜನ ಸಾಮಾನ್ಯರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಹಾಗಾಗಿ 62ನೆ ತೂಕೂರು ಗ್ರಾಮದ ಸುಮಾರು 3500 ಮನೆಗಳಿಗೆ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿಯಿಂದ ಆಹಾರದ ಕಿಟ್‌ಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News