ಮಂಗಳೂರು : ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಮಂಗಳೂರು, ಜೂ.12: ಇಂಧನ ಬೆಲೆ ಏರಿಕೆ ವಿರುದ್ಧ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್‌ರವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಮಂಗಳೂರಿನ ಲೇಡಿಹಿಲ್ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೋರವರು ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಆಗಿದೆ. ದೇಶದ ಜನರ ಈ ಸಂಕಷ್ಟಕ್ಕೆ ದೇಶದ ಪ್ರಧಾನಿಯೇ ನೇರ ಹೊಣೆಗಾರರಾಗಿದ್ದಾರೆ ಎಂದರು.ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಮೋದಿ ಹೇಳುವ ಅಚ್ಚೆದಿನ್ ಖಂಡಿತ ಈ ದೇಶಕ್ಕೆ ಬೇಡ. ಕೊರೊನಾದಿಂದ ಕೆಲಸವಿಲ್ಲದೆ ಮನೆಯಲ್ಲೇ ಇರುವ ಜನರಿಗೆ ಭಾರದ ಮೇಲೆ ಹೊರೆ ಎಂಬಂತೆ ಬಿಜೆಪಿ ಸರ್ಕಾರ ಜನರ ಆಶ್ವಾಸನೆಗೆ ಮೋಸ ಮಾಡಿದೆ. ಜನರು ಕಂಡಿತ ಇದನ್ನು ಕ್ಷಮಿಸಲ್ಲ ಎಂದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್ , ಮನಪಾ ಪ್ರತಿಪಕ್ಷ ನಾಯಕ ಎ.ಸಿ.ವಿನಯರಾಜ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಭಾಸ್ಕರ್ ಕೆ, ಮುಖಂಡರಾದ ಬಿ.ಜಿ ಸುವರ್ಣ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ಕುಮಾಸ್ ದಾಸ್, ಕಾರ್ಪೊರೇಟರ್ ನವೀನ್ ಡಿಸೋಜ, ಕೇಶವ ಮರೊಳಿ, ಅಶ್ರಫ್ ಬಜಾಲ್, ಅನಿಲ್ ಪೂಜಾರಿ, ಜೀನತ್ ಸಂಶುದ್ದೀನ್, ಮುಖಂಡರಾದ ಮೆರಿಲ್ ರೇಗೋ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಗಳಾದ ರಘುರಾಜ್ ಕದ್ರಿ, ಚೇತನ್ ಕುಮಾರ್, ಯೋಗೀಶ್ ನಾಯಕ್, ತನ್ವೀರ್ ಶಾ, ಮುಹಮ್ಮದ್ ಕುಂಜತ್ ಬೈಲ್, ರಜನೀಶ್ ಕಾಪಿಕಾಡ್, ಪದ್ಮನಾಭ ಅಮಿನ್, ಶಾಂತಲಾ ಗಟ್ಟಿ, ರಾಕೇಶ್ ದೇವಾಡಿಗ, ತನ್ವೀರ್ ಶಾ, ಮಂಜುಳಾ ನಾಯಕ್, ರೂಪಾ ಚೇತನ್, ಗಿರೀಶ್ ಶೆಟ್ಟಿ, ನೀರಜ್ ಪಾಲ್, ರಾಜೇಂದ್ರ ಚಿಲಿಂಬಿ, ಮೀನಾ ಟೆಲ್ಲಿಸ್, ಟಿ.ಸಿ ಗಣೇಶ್, ಆಬಿದ್ ಕುದ್ರೋಳಿ, ವಸಂತಿ ಮೋಹನಂಗಯ್ಯ ಸ್ವಾಮಿ, ಸಮರ್ಥ್ ಭಟ್, ಭುವನ್, ಮಿಥುನ್, ವಹಾಬ್ ಕುದ್ರೋಳಿ, ಇಮ್ರಾನ್, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.