ಡ್ರಗ್ಸ್‌ ಸ್ಮಗ್ಲಿಂಗ್‌ ದಂಧೆ: ಬಿಜೆಪಿ ಯುವ ಮುಖಂಡ ಸಹಿತ 9 ಮಂದಿಯ ಬಂಧನ

Update: 2021-06-12 14:05 GMT

ಚತ್ರಾ: ಭಾರತೀಯ ಜನತಾ ಪಕ್ಷದ ಯುವ ಮುಖಂಡನ ಸಹಿತ 9 ಮಂದಿಯನ್ನು ಡ್ರಗ್ಸ್‌ ಸ್ಮಗ್ಲಿಂಗ್‌ ದಂಧೆಯಲ್ಲಿ ಭಾಗಿಯಾದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆಂದು ವರದಿ ಮಾಡಿದೆ. ಬಂಧಿತರಲ್ಲಿ ಹಿಮಾಂಶು ಕುಮಾರ್‌ ಎಂಬಾತ ಬಿಜೆಪಿ ಯುವ ವಿಭಾಗದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದಾನೆ ಎಂದು telegraphindia.com  ವರದಿ ತಿಳಿಸಿದೆ.

ಚತ್ರಾ ಪೊಲೀಸ್‌ ವರಿಷ್ಠಾಧಿಕಾರಿ ರಿಷವ್‌ ಕುಮಾರ್‌ ನೇತೃತ್ವದ ತಂಡವು ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿದೆ. 296 ಗ್ರಾಂ ಬ್ರೌನ್‌ ಶುಗರ್‌, ಒಂದು ಕಾರು, ಬೈಕ್‌, 8 ಮೊಬೈಲ್‌ ಫೋನ್‌ ಮತ್ತು 7.74 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಕೇಸ್ರಿ ಚೌಕ್ ಬಳಿಯ ನಿವಾಸಿ ಧೀರಜ್ ಕುಮಾರ್ ಎಂಬಾತ ತನ್ನ ಗ್ರಾಹಕರಿಗೆ ಸರಬರಾಜು ಮಾಡಲು ಬ್ರೌನ್‌ ಶುಗರ್‌ ಸಾಗಾಟ ಮಾಡುತ್ತಿದ್ದಾನೆಂಬ ಮಾಹಿತಿಯು ಪೊಲೀಸರಿಗೆ ಲಭಿಸಿತ್ತು. ಪೊಲೀಸ್ ತಂಡವು 2.10 ಗ್ರಾಂ ಬ್ರೌನ್‌ ಶುಗರ್‌ ನೊಂದಿಗೆ ಧೀರಜ್‌ ನನ್ನು ಬಂಧಿಸಿದೆ.

ಈ ಪ್ರಕರಣದ ಕಿಂಗ್‌ ಪಿನ್‌ ಅಮಿತ್‌ ಗುಪ್ತಾ ಎಂಬಾತನನ್ನು ಬಂಧಿಸುವ ವೇಳೆ ಬಿಜೆಪಿ ನಾಯಕ ಹಿಮಾಂಶು ಕುಮಾರ್‌, ಅನುರಾಗ್ ಕುಮಾರ್ ಮತ್ತು ಚಂದನ್ ಕುಮಾರ್ ಎಂಬವರನ್ನೂ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬಿಜೆಪಿ ಯುವ ಮುಖಂಡನ ಕಾರು (photo: telegraphindia)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News