×
Ad

ಕುಂದಾಪುರ, ಬೈಂದೂರಿನಿಂದ ವಿದೇಶಕ್ಕೆ ತೆರಳುವವರಿಗೆ ಜೂ.14ರಂದು ಲಸಿಕೆಗಾಗಿ ಅನೆಕ್ಚರ್-3

Update: 2021-06-12 20:01 IST

ಉಡುಪಿ, ಜೂ.12: ಸರಕಾರದ ಆದೇಶದಂತೆ 18ರಿಂದ 44 ವರ್ಷದೊಳಗಿನ ಆಯ್ದ ಗುಂಪುಗಳಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗುತ್ತಿದ್ದು, ಇದರಂತೆ ಬೈಂದೂರು ತಾಲೂಕು ಹಾಗೂ ಕುಂದಾಪುರ ತಾಲೂಕುಗಳಿಂದ ಉದ್ಯೋಗ ನಿಮಿತ್ತ ಹಾಗೂ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾರ್ಥಿಗಳಿಗೆ ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಅನೆಕ್ಚರ್-3ನ್ನು ಜೂ.14ರ ಸೋಮವಾರ ನೀಡಲಾಗುತ್ತದೆ.

ಕುಂದಾಪುರ ಮತ್ತು ಬೈಂದೂರು ತಾಲೂಕಿನವರು ಅನೆಕ್ಚರ್ ಪಡೆಯಲು ಉಡುಪಿಗೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಬೈಂದೂರು ತಾಲೂಕಿನವರಿಗೆ ಜೂ.14ರ ಸೋಮವಾರ ಬೈಂದೂರು ತಾಲೂಕು ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಅಪರಾಹ್ನ 1:00ರವರೆಗೆ ಹಾಗೂ ಕುಂದಾಪುರ ತಾಲೂಕಿನವರಿಗೆ ಕುಂದಾಪುರ ತಾಲೂಕು ಕಚೇರಿಯಲ್ಲಿ ಅಪರಾಹ್ನ 2:00ರಿಂದ ಸಂಜೆ 5:00ರವರೆಗೆ ಅನೆಕ್ಚರ್-3ನ್ನು ನೀಡಲಾಗುತ್ತದೆ.

ಇದಕ್ಕಾಗಿ ವಿದೇಶಕ್ಕೆ ತೆರಳಲು ಲಸಿಕೆ ಪಡೆಯಲು ಬಯಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‌ಪೋರ್ಚ್, ಉದ್ಯೋಗಿಗಳು ಉದ್ಯೋಗದಾತ ಕಂಪೆನಿಯ ಆಫರ್ ಲೆಟರ್, ವೀಸಾ, ವ್ಯಾಸಂಗದ ಬಗ್ಗೆ ವಿದ್ಯಾಸಂಸ್ಥೆಯ ಪತ್ರಗಳ ಮೂಲಪ್ರತಿ ಹಾಗೂ ಸ್ವಯಂ ದೃಢೀಕರಿಸಿದ ಜೆರಾಕ್ಸ್ ಪ್ರತಿಗಳೊಂದಿಗೆ ಜೂ.14ರಂದು ಬೈಂದೂರು-ಕುಂದಾಪುರ ತಾಲೂಕು ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿ ಅನೆಕ್ಚರ್-3ನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News