ಸಾಲ ತೀರಿಸಲಾಗದ ಚಿಂತೆಯಲ್ಲಿ ಆತ್ಮಹತ್ಯೆ

Update: 2021-06-12 16:13 GMT

ಬ್ರಹ್ಮಾವರ, ಜೂ.12: ಸೊಸೈಟಿಯಲ್ಲಿ ಅಡವಿಟ್ಟು ಸಾಲ ಮಾಡಿದ್ದು, ಸಾಲ ತೀರಿಸಲಾಗದ ಚಿಂತೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಲತಾ ಭಾಯಿ (50) ಎಂದು ಗುರುತಿಸಲಾಗಿದೆ.

ಅವರು ಆಸ್ತಿಯನ್ನು ಸೊಸೈಟಿಯಲ್ಲಿ ಅಡವಿಟ್ಟು ಸಾಲ ಮಾಡಿದ್ದು, ಸಾಲ ತೀರಿಸದೇ ಈಗ ಅದು ಏಲಂಗೆ ಬಂದಿದ್ದು, ಇದರಿಂದ ಮನನೊಂದ ಅವರು ಜೂ.5ರಂದು ರಾತ್ರಿ ಮದ್ಯಪಾನದಲ್ಲಿ ಇಲಿಪಾಷಣ ಸೇವಿಸಿ ಅಸ್ವಸ್ಥರಾಗಿದ್ದರು. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಜೂ.11ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News