×
Ad

ಜುಗಾರಿ ಆಟವಾಡುತ್ತಿದ್ದ 9 ಮಂದಿ ಸೆರೆ

Update: 2021-06-12 22:11 IST

ಮಂಗಳೂರು, ಜೂ.12: ನಗರ ಹೊರವಲಯದ ಯೆಯ್ಯಾಡಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಹಣವನ್ನು ಪಣವಾಗಿಟ್ಟು ಜುಗಾರಿ ಆಟವಾಡುತ್ತಿದ್ದ 9 ಮಂದಿಯನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿಶ್ವಾಸ್ ಶೆಟ್ಟಿ, ಸಂತೋಷ್ ದೇವಾಡಿಗ, ಸಂದೀಪ್ ಪೂಜಾರಿ, ಸುದರ್ಶನ್ ಪೂಜಾರಿ, ಮನೋಜ್, ಅವಿತ್, ಮಹಂತಪ್ಪ, ಪುರುಷೋತ್ತಮ ಸುವರ್ಣ, ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಎಸ್ಸೈ ಅನಿತಾ ನಿಕ್ಕಂ ದಾಳಿ ನಡೆಸಿ ಆರೋಪಿಗಳಿಂದ 2370 ರೂ, ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News