ವೈದ್ಯರ ಮೇಲೆ ಹಲ್ಲೆ ಆರೋಪ: ಆಸಿಫ್ ಚೊಕ್ಕಬೆಟ್ಟುಗೆ ನಿರೀಕ್ಷಣಾ ಜಾಮೀನು
Update: 2021-06-12 22:17 IST
ಮಂಗಳೂರು, ಜೂ.12: ವೈದ್ಯರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಮುಹಮ್ಮದ್ ಆಸಿಫ್ ಚೊಕ್ಕಬೆಟ್ಟುಗೆ ನ್ಯಾಯಾಲಯ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ನಗರದ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ಡಾ.ಜಯಪ್ರಕಾಶ್‌ಗೆ ಮೇ 21ರಂದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮುಹಮ್ಮದ್ ಆಸಿಫ್ ಚೊಕ್ಕಬೆಟ್ಟುಗೆ ನ್ಯಾಯಾಲಯ ಜಾಮೀನು ನೀಡಿದೆ. ಆಸಿಫ್ ಚೊಕ್ಕಬೆಟ್ಟು ಪರವಾಗಿ ನ್ಯಾಯವಾದಿ ಮುಹಮ್ಮದ್ ಅಸ್ಗರ್ ಮುಡಿಪು ವಾದಿಸಿದ್ದರು.
ಗರ್ಭಿಣಿ ಖತೀಜಾ ಜಾಸ್ಮಿನ್‌ಗೆ ಚಿಕಿತ್ಸೆ ನಿರಾಕರಿಸಿದ್ದ ಬಗ್ಗೆ ಆಸಿಫ್ ಚೊಕ್ಕಬೆಟ್ಟು ವೈದ್ಯರನ್ನು ಪ್ರಶ್ನಿಸಿದ್ದರು ಎನ್ನಲಾಗಿದ್ದು, ಆಸಿಫ್ ತಂಡವನ್ನು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಡಾ.ಜಯಪ್ರಕಾಶ್ ನೀಡಿದ ದೂರಿನಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದರು.