×
Ad

ಜೂ.13: ಕ್ಯಾರಿಯರ್ ಪ್ಲಸ್ ಕಾರ್ಯಗಾರ

Update: 2021-06-12 22:19 IST

ಮಂಗಳೂರು, ಜೂ.12: ಎಸ್ಸೆಸ್ಸೆಫ್ ದ.ಕ. ಜಿಲ್ಲೆ ವೆಸ್ಟ್ ವತಿಯಿಂದ ಪ್ರಾಢ ಶಾಲಾ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿ ಗಳಿಗಾಗಿ ಕ್ಯಾರಿಯರ್ ಪ್ಲಸ್ ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರ ಜೂ.13ರಂದು ಝೂಂ ಹಾಗೂ ಯುಟ್ಯೂಬ್ ಮೂಲಕ ಎಸ್ಸೆಸ್ಸೆಫ್ ದ.ಕ. ಜಿಲ್ಲೆ ವೆಸ್ಟ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ವಿಭಾಗದ ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಂಶೋಧನಾ ವಿಭಾಗದ ಪ್ರಾಚಾರ್ಯ ಶಹೀನ್ ಅಲಿ ಎಸ್.ಬಿ. ಹಾಗೂ ನಾಸಿರ್ ಮಾಸ್ಟರ್ ಬಜ್ಪೆ ತರಬೇತಿ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News