ಸವಿತಾ ಸಮಾಜದಿಂದ ಆಹಾರ ಸಾಮಗ್ರಿ ಕಿಟ್ ವಿತರಣೆ
Update: 2021-06-13 20:12 IST
ಉಡುಪಿ, ಜೂ.13: ಸವಿತಾ ಸಮಾಜ ಮಲ್ಪೆ ಘಟಕದ ವತಿಯಿಂದ ಸದಸ್ಯರ ಕ್ಷೇಮನಿಧಿಯಿಂದ ಸದಸ್ಯರಿಗೆ ಆಹಾರ ಸಾುಗ್ರಿ ಕಿಟ್ ಗಳನ್ನು ವಿತರಿಸಲಾಯಿತು.
ಮಲ್ಪೆ ವಲಯ ಸವಿತಾ ಸಮಾಜದ ಅಧ್ಯಕ್ಷ ಭರತ್ ಸುವರ್ಣ ನಿಟ್ಟೂರು, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಆದಿಉಡುಪಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿ ಮುಲ್ಕಿ, ಸವಿತಾ ಸಮಾಜ ಸೌಹಾರ್ದ ಸಹಕಾರಿಯ ಅಧ್ಯಕ್ಷ ನವೀನ್ಚಂದ್ರ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಉಪಸ್ಥಿತರಿದ್ದರು.