×
Ad

ಪುಟ್ಟ ಮಗುವಿನೊಂದಿಗೆ ಕಾಲ್ನಡಿಗೆಯಲ್ಲಿ ವಲಸೆ ಕಾರ್ಮಿಕ ಕುಟುಂಬ

Update: 2021-06-13 20:24 IST

ಉಡುಪಿ, ಜೂ.13: ಲಾಕ್‌ ಡೌನ್‌ನಲ್ಲಿ ಅಸಹಾಯಕತೆ ಎದುರಾದ ಕಾರಣ ದಿಂದ ವಲಸೆ ಕಾರ್ಮಿಕ ಕುಟುಂಬವೊಂದು ಪುಟ್ಟ ಮಗುವಿನೊಂದಿಗೆ ಕುಂದಾಪುರದಿಂದ ತನ್ನ ಊರಾದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಕಾಲ್ನಡಿಗೆ ಯಲ್ಲಿ ಹೊರಟಿದ್ದು, ಇವರನ್ನು ಉಡುಪಿಯಲ್ಲಿ ಗುರುತಿಸಿದ ಸಾಮಾಜಿಕ ಕಾರ್ಯಕರ್ತರು, ರೈಲು ಹತ್ತಿಸಿ ಊರಿಗೆ ಕಳುಹಿಸಿದ ಮಾನವೀಯ ಕಾರ್ಯ ವರದಿಯಾಗಿದೆ.

ವಲಸೆ ಕಾರ್ಮಿಕ ದಂಪತಿಗಳು, ಪುಟ್ಟ ಮಗುವಿನೊಂದಿಗೆ ಕುಂದಾಪುರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ದಿನಕಳೆಯುತಿದ್ದರು. ಒಂದಡೆ ಕೆಲಸವೂ ಇಲ್ಲ, ಹಣವು ಇಲ್ಲ. ಹಸಿವು ನೀಗಿಸಲು ಆಹಾರ ಇಲ್ಲದೆ ದಿಕ್ಕೆಟ್ಟು ಊರು ಸೇರಲು ಮುಂದಾ ದರು. ಅದರಂತೆ ಕಾಲ್ನಡಿಗೆಯಲ್ಲಿ ಕುಂದಾಪುರದಿಂದ ಸಕಲೇಶಪುರ ಸೇರಲು ಸುರಿಯುವ ಮಳೆಯಲ್ಲಿ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಬೆಳೆಸಿದರು.

ಉಡುಪಿ ಕರಾವಳಿ ಬೈಪಾಸ್ ಬಳಿ ದಂಪತಿಗಳು, ಪುಟ್ಟ ಮಗುವನ್ನು ಹೊತ್ತು ಕೊಂಡು ನಡಿಗೆಯಲ್ಲಿ ಸಾಗಿಬರುತ್ತಿರುವ ವಿಷಯ ತಿಳಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಅವರ ಅಸಹಾಯಕತೆಗೆ ಸ್ಪಂದಿಸಿದರು.

ಅವರಿಗೆ ಅನ್ನ ಆಹಾರ ನೀಡಿ ಉಪಚರಿಸಿ, ಪ್ರಯಾಣದ ಖರ್ಚು ನೀಡಿ ರೈಲು ಮೂಲಕ ಸಕಲೇಶಪುರಕ್ಕೆ ಕಳಿಸಿಕೊಟ್ಟು ಮಾನವಿಯತೆ ಮೆರೆದರು. ಮಾಹಿತಿ ನೀಡಿದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಕಾರ್ಯಾಚರಣೆಗೆ ಸಹಕರಿಸಿದರು. ಜೊತೆಗೆ ಸ್ಥಳೀಯ ಸಂದೀಪ್ ಆಚಾರ್ಯ ಕೂಡ ಭಾಗಿಯಾ ಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News