ಫರಂಗಿಪೇಟೆ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು: ಪಂಚಾಯತ್ ಅಧ್ಯಕ್ಷ, ಪಿಡಿಒ ಪರಿಶೀಲನೆ

Update: 2021-06-15 14:00 GMT

ಬಂಟ್ವಾಳ, ಜೂ.15: ರೈಲ್ವೆ ಅಧಿಕಾರಿಗಳು ಫರಂಗಿಪೇಟೆ ಮುಖ್ಯ ರಸ್ತೆ ಸಮೀಪದ ವರದೇಶ್ವರ ದೇವಸ್ಥಾನದ ಹಿಂಭಾಗದಲ್ಲಿದ್ದ ಚರಂಡಿ ಮುಚ್ಚಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಂಪೌಂಡ್ ಇದೀಗ ಅನಾಹುತ ಸೃಷ್ಟಿಸಿ ಹಾಕಿದ್ದು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ದೇವಸ್ಥಾನದ ಒಳಗೆ ಹರಿದು ಬರುತ್ತಿದೆ.

ದೇವಸ್ಥಾನದ ಒಳಭಾಗದಲ್ಲಿ ಮಳೆ ನೀರು ತುಂಬಿದ್ದು ದೇವಾಲಯದ ಅರ್ಚಕರು ಹಾಗೂ ಆಡಳಿತ ಸಮಿತಿ ಕಂಗಾಲಾಗಿದೆ. ಘಟನಾ ಸ್ಥಳಕ್ಕೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಪಿಡಿಒ ಹರೀಶ್ ಕೆ.ಎ. ಅವರು ಮಂಗಳವಾರ ಭೇಡಿ ನೀಡಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಶಾಸಕರು ಹಾಗೂ ಸಂಸದರಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪಂಚಾಯತ್ ವತಿಯಿಂದ ಪತ್ರ ಬರೆದು ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ಅಧ್ಯಕ್ಷ ರಮ್ಲಾನ್ ಈ ವೇಳೆ ತಿಳಿಸಿದ್ದಾರೆ.

ಈ ಸಂದರ್ಭ ವರದೇಶ್ವರ ದೇವಸ್ಥಾನದ ಮೊಕ್ತೇಸರರಾದ ಪೊಳಲಿ ಕೃಷ್ಣತಂತ್ರಿ ಹಾಗೂ ರಾಮ್ ಮೋಹನ್ ತಂತ್ರಿ ಉಪಸ್ಥಿತರಿದ್ದು ಸ್ಥಳೀಯರಾದ ಜಗದೀಪ್  ಕುಂಪಣಮಜಲು, ಜಗದೀಶ್ ಆರ್ಕುಳ, ಸುರೇಶ್ ಕುಚ್ಚೂರ್, ಮನೀಶ್  ಕುಂಪಣಮಜಲು,  ಶಶಾಂಕ್  ಫರಂಗಿಪೇಟೆ, ರಾಕೇಶ್ ತೆಕ್ಕೆಹಿತ್ಲು, ಪ್ರಣಯ್  ಕುಂಜತ್ಕಳ, ರಾಕೇಶ್ ಮೊದಲಾದವರು ದೇವಸ್ಥಾನದ ಒಳಗಿನ ನೀರು ತೆರವುಗೊಳಿಸಲು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News