ಮಣಿಪಾಲ ಕೆಎಂಸಿಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

Update: 2021-06-15 15:19 GMT

ಮಣಿಪಾಲ, ಜೂ.15: ರಕ್ತದಾನ, ಸುರಕ್ಷಿತ ರಕ್ತ ಹಾಗೂ ರಕ್ತ ಉತ್ರನ್ನಗಳ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಲು ಕೋವಿಡ್-19 ನಿಯಮಾವಳಿ ಗಳನ್ನು ಅನುಸರಿಸಿ ಮಣಿಪಾಲ ಕೆಎಂಸಿಯಲ್ಲಿ ಮಂಗಳವಾರ ವಿಶ್ವ ರಕ್ತಾನಿಗಳ ದಿನವನ್ನು ಆಚರಿಸಲಾಯಿತು.

ರಕ್ತದಾನಿಗಳನ್ನು ಪ್ರೇರೇಪಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿದ ಜನರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ಕೆ. ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವರ್ಷದ ದ್ಯೇಯವಾಕ್ಯವಾದ ‘ರಕ್ತ ನೀಡಿ ಮತ್ತು ಜಗತ್ತಿನ ಹೃದಯ ಬಡಿತ ಉಳಿಸಿರಿ’ ಎಂಬ ವಿಷಯದ ಕುರಿತು ಮಾತನಾಡಿದ ಅವರು ರಕ್ತದಾನದ  ಮಹತ್ವವನ್ನು ಒತ್ತಿ ಹೇಳಿದರು.

ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ಕೆ. ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವರ್ಷದ ದ್ಯೇಯವಾಕ್ಯವಾದ ‘ರಕ್ತ ನೀಡಿ ಮತ್ತು ಜಗತ್ತಿನ ಹೃದಯ ಬಡಿತ ಉಳಿಸಿರಿ’ ಎಂಬ ವಿಷಯದ ಕುರಿತು ಮಾತನಾಡಿದ ಅವರು ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು. ಕೆಎಂಸಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಜೀವ ಉಳಿಸಲು ಮುಂದಾಗಿರುವ ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಶ್ಲಾಸಿದರು. ಅಲ್ಲದೇ ಅವರು ಲಸಿಕಾ ಪೂರ್ವ ರಕ್ತದಾನದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯಶ್‌ಪಾಲ್ ಸುವರ್ಣ ಮತ್ತು ರತ್ನಾಕರ ಸಾಮತ್ ಅವರು ಸ್ವಯಂಪ್ರೇರಿತವಾಗಿ ರಕ್ತದಾನಕ್ಕಾಗಿ ಮುಂದೆ ಬರುವಂತೆ ಯುವ ಜನತೆಯನ್ನು ಪ್ರೇರೇಪಿಸಿದರು. ಎಂಐಟಿಯ ಪ್ರಾಧ್ಯಾಪಕ ಡಾ.ಬಾಲೃಷ್ಣ ಮದ್ದೋಡಿ ಉಪಸ್ಥಿತರಿದ್ದರು.

ಡಾ.ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನೀಡುವ ಅತ್ಯುತ್ತಮ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳ 2020 ಸಾಲಿನ ಪ್ರಶಸ್ತಿಗಳನ್ನು ರಶ್ಮಿ ಮತ್ತು ಕೃಷ್ಣಮೂರ್ತಿ ರಾವ್ ಇವರಿಗೆ ನೀಡಲಾಯಿತು. ಅಭಯ ಹಸ್ತ ಹೆಲ್ಫ್‌ಲೈನ್ 2020ರಲ್ಲಿ ಅತಿಹೆಚ್ಚು ರಕ್ತದಾನ ಶಿಬಿರ ಆಯೋಜಿಸಿದ್ದಕ್ಕಾಗಿ ಪ್ರಶಸ್ತಿ ಪಡೆಯಿತು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರಕ್ತದಾನಿಗಳನ್ನು ಸಂಘಟಿಸಿದ ಪ್ರಯತ್ನಗಳಿಗಾಗಿ ಸತೀಶ್ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.

ಮಣಿಪಾಲ ಕೆಎಂಸಿ ರಕ್ತ ಕೇಂದ್ರದ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಅತಿಥಿ ಗಳನ್ನು ಸ್ವಾಗತಿಸಿದರು. ಕೋವಿಡ್ ಬಿಕ್ಕಟ್ಟಿನ ಈ ಅವಧಿಯಲ್ಲಿ 70 ಕ್ಕೂ ಹೆಚ್ಚು ಸ್ವಯಂಪ್ರೇರಿತ ರಕ್ತದಾನಿಗಳು ಇಂದಿನ ರಕ್ತದಾನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News