ಇಂಧನ ಬೆಲೆ ಏರಿಕೆ: ಬಂಟ್ವಾಳ ಕಾಂಗ್ರೆಸ್ ನಿಂದ ಪ್ರತಿಭಟನೆ

Update: 2021-06-15 15:59 GMT

ಬಂಟ್ವಾಳ, ಜೂ.15: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಉಳಿ, ಮಣಿನಾಲ್ಕೂರು, ಬಡಗ ಕಜೇಕಾರ್ ವಲಯ ಕಾಂಗ್ರೆಸ್ ವತಿ ಯಿಂದ ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯದ ಬಿಜೆಪಿ ಸರಕಾರದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಿತು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೋನ ಸಾಂಕ್ರಾಮಿಕ ಕಾಯಿಲೆ ವಿಷಮ ಪರಿಸ್ಥಿತಿಗೆ ತಲುಪಿ ಜನತೆ ಭಯ ಭಯ ಭೀತರಾಗಿ ನಿತ್ಯ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಯೇರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸರಕಾರವನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಉಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷ ಜಯ ಬಂಗೇರ, ವಿಶ್ವನಾಥ್ ಸಾಲ್ಯಾನ್ ಬಿತ್ತ, ಆದಂ ಕುಂಞಿ,  ಕಾವಲ ಪಡೂರು ಪಂಚಾಯತ್ ಅಧ್ಯಕ್ಷೆ ರಜನಿ ಕುಲಾಲ್, ಬಡಗ ಕಜೆಕಾರು ಪಂಚಾಯತ್ ಉಪಾಧ್ಯಕ್ಷ ದೀಕಯ ಬಂಗೇರ, ಪಂಚಾಯತ್ ಸದಸ್ಯರಾದ ಫಾರೂಕ್ ಮನಿನಲ್ಕೂರ್, ಜಾನ್ ಶೇರ, ಚಂದ್ರಶೇಕರ್ ಕರ್ಣ, ಮುಖಂಡರಾದ  ಅಬ್ದುಲ್ ರಹಿಮಾನ್, ವಾಸು ಪೂಜಾರಿ, ಸುಧಾಕರ ಶನೋಯ್, ಪರಮೇಶ್ವರ ನಾಯ್ಕ, ಸದಾನಂದ ಶೆಟ್ಟಿ, ಚಂದ್ರಹಾಸ ನಾಯ್ಕ, ವಾಸುದೇವ ಮಯ್ಯ, ತಾರಾನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News