​ನ್ಯೂ ಶಮ್ಸ್ ಶಾಲೆಗೆ ನೂತನ ಪ್ರಾಂಶುಪಾಲರ ನೇಮಕ

Update: 2021-06-15 16:26 GMT

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಗೆ ಚೈನೈ ಮೂಲದ ನೂತನ ಪ್ರಾಂಶುಪಾಲರನ್ನು ನೇಮಿಸಿದ್ದು, ಅವರ ಮಾರ್ಗದರ್ಶನದಲ್ಲಿ ಸಮರ್ಪಕವಾಗಿ ಶೇ.100 ಆನ್ ಲೈನ್ ತರಗತಿ ನಡೆಲಾಗುತ್ತಿದೆ. ಪೆಂಡಮಿಕ್ ಪರಿಸ್ಥಿತಿಯನ್ನು ಅರಿತುಕೊಂಡು ಪಾಲಕರಿಗೆ ಶಾಲಾ ಶುಲ್ಕದ ಹೊರೆಯನ್ನು ಕಡಿಮೆಗೊಳಿಸಲಾಗಿದೆ ಎಂದು ಸ್ಕೂಲ್ ಬೋರ್ಡ್ ಚೇರ್ಮನ್ ಕಾದಿರ್ ಮೀರಾ ಪಟೇಲ್ ಹೇಳಿದರು.

ಅವರು ಮಂಗಳವಾರ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂಶಮ್ಸ್ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ 2021-22 ನೆ ಶೈಕ್ಷಣಿಕ ವರ್ಷದ ಯೋಜನೆಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಕೊರೋನ ಸೋಂಕು ಎಲ್ಲ ಕ್ಷೇತ್ರಗಳು ಪ್ರಭಾವಕ್ಕೊಳಗಾಗಿದ್ದು ವಿಶೇಷವಾಗಿ ಶಿಕ್ಷಣ ಕ್ಷೇತ್ರವು ಹೆಚ್ಚಿನ ಪ್ರಭಾವಕ್ಕೊಳಗಾಗಿದೆ. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಎಲ್ಲ ರೀತಿಯಿಂದಲೂ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದ ಅವರು ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.

ತನ್ನ ಮುಂದಿನ ಶೈಕ್ಷಣಿಕ ಯೋಜನೆಗಳ ಕುರಿತಂತೆ ಮಾತನಾಡಿದ ನೂತನ ಪ್ರಾಂಶುಪಾಲ ಲಿಯಾಖತ್ ಅಲಿ, ಸರ್ಕಾರದ ಮಾರ್ಗದರ್ಶಿಯಂತೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಆಫ್ ಲೈನ್ ತರಗತಿಗಳನ್ನು ನಡೆಸಲಾಗುವುದು ಜೊತೆಗೆ ಆನ್‍ಲೈನ್ ತರಗತಿಗಳು ಕೂಡ ನಡೆಯಲಿದ್ದು, ಶಾಲೆಯಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ಐಡಿಯನ್ನು ನೀಡಲಾಗಿದ್ದು ಅದನ್ನು ಉಪಯೋಗಿಸಿಕೊಂಡು ಅನ್ಲೈನ್ ತರಗತಿಗೆ ಸೇರಬಹುದಾಗಿದೆ. ಯಾವುದೇ ತೊಂದರೆಗಳು ಉಂಟಾದಲ್ಲಿ ನೇರವಾಗಿ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಅವರು ಪಾಲಕರಲ್ಲಿ ಮನವಿ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಅನಂ ಆಲಾ ಎಂ.ಟಿ, ಅನುಭವಿ ಪ್ರಾಂಶುಪಾಲರು ನಮ್ಮ ಸಂಸ್ಥೆಯಲ್ಲಿ ಸೇವೆ ಮಾಡುತ್ತಿದ್ದು ಭಟ್ಕಳದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಲಿದ್ದಾರೆ. ಪ್ರತಿ ವಿದ್ಯಾರ್ಥಿಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ನೂತನ ಯೋಜನೆಗಳನ್ನು ಅವರು ರೂಪಿಸುತ್ತಿದ್ದಾರೆ ಎಂದರು. 

ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಮೌಲಾನ ಸೈಯ್ಯದ್  ಝುಬೈರ್, ನಝೀರ್ ಆಹ್ಮದ್ ಖಾಝಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News