ಸಹಾಯ್ ಸುಳ್ಯ ಸರ್ಕಲ್ ಸಹಭಾಗಿತ್ವದಲ್ಲಿ ಸ್ಯಾನಿಟೈಸರ್ ಸಿಂಪಡನೆ

Update: 2021-06-15 16:48 GMT

ಸುಳ್ಯ, ಜೂ.15: ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ವತಿಯಿಂದ, ಎಸ್ ವೈಎಸ್ ಹಾಗೂ ಸಹಾಯ್ ಸುಳ್ಯ ಸರ್ಕಲ್ ಸಹಕಾರದೊಂದಿಗೆ ಕೊರೋನ ನಿಯಂತ್ರಣಕ್ಕಾಗಿ ಸ್ಯಾನಿಟೈಸರ್ ಸಿಂಪಡನೆಯು ನಿಂತಿಕಲ್ಲು ಜಂಕ್ಷನ್ ನಿಂದ ಆರಂಭಗೊಂಡಿತು.

ನಿಂತಿಕಲ್ಲು, ಅಲೆಕ್ಕಾಡಿ, ಸಮಹಾದಿ, ಎಣ್ಮೂರು, ಮುಚ್ಚಿಲ, ಪಂಜ ಹಾಗೂ ಪರಿಸರ ಪ್ರದೇಶಗಳಲ್ಲಿ ಕೊರೋನ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಣೆಯನ್ನು ಮಾಡಲಾಯಿತು.

ಬ್ಯಾಂಕ್, ಸರ್ಕಾರಿ ಕಚೇರಿ, ಗ್ರಾಮ ಪಂಚಾಯತ್, ಆಸ್ಪತ್ರೆಗಳು, ಕೋವಿಡ್ ಸೆಂಟರ್, ಬಸ್ ನಿಲ್ದಾಣ, ಅಂಗಡಿ ಮುಂಗ್ಗಟ್ಟುಗಳ ಮುಂಭಾಗ, ಜನ ಸೇರುವ ಸ್ಥಳ, ಕಂಟೈನ್ ಮೆಂಟ್ ಝೋನ್, ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು. ಕೆಲವೆಡೆ ಸಂಘಟನಾ ಕಾರ್ಯಕರ್ತರಿಂದ ರಸ್ತೆ ಬದಿ, ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಲಾಯಿತು. ನಿಂತಿಕಲ್ಲು ಜಂಕ್ಷನ್ ನಿಂದ ಪ್ರಾರಂಭವಾದ ಸಿಂಪಡಣಾ ಕಾರ್ಯವು ಪಂಜ ಗ್ರಾಮ ಪಂಚಾಯತ್ ನಲ್ಲಿ ಸಮಾಪ್ತಿಗೊಂಡಿತು. 

ಕಾರ್ಯಕ್ರಮದಲ್ಲಿ ಎಸ್ ವೈಎಸ್ ನಾಯಕ ಜಬ್ಬಾರ್ ಹನೀಫಿ ನಿಂತಿಕಲ್ಲು ಪ್ರಾರ್ಥನೆಗೈದರು. ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಎಡಮಂಗಲ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ, ಪೋಲಿಸ್ ಅಧಿಕಾರಿಗಳಾದ ಮಹಾದೇವ್, ರೋಷನ್, ಡಿಂಪಲ್ ಸೇವಾ ಕೇಂದ್ರ ಮಾಲಕ ವಸಂತ ಎನ್.ಟಿ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು.

ಎಸ್ ವೈಎಸ್ ನಾಯಕರಾದ ಇಬ್ರಾಹಿಂ ಕಜೆ, ಹನೀಫ್ ಹಾಜಿ ಇಂದ್ರಾಜೆ, ರಝಾಕ್ ಅಲೆಕ್ಕಾಡಿ, ಉಮ್ಮರ್ ಕುಳಾಯಿತೋಡಿ, ಮುಹಮ್ಮದ್ ಜಿ (ಮಯಮ್ಮು) ಹಾಗೂ ಡಿವಿಶನ್ ನಾಯಕರಾದ ಮುಸ್ತಫಾ ಸಮಹಾದಿ, ಸಿರಾಜ್ ಸಅದಿ ಅಲೆಕ್ಕಾಡಿ, ನಿಂತಿಕಲ್ಲು ಸೆಕ್ಟರ್ ಪ್ರ.ಕಾರ್ಯದರ್ಶಿ ಶಿಹಾಬ್ ಪಂಜ, ಕೋಶಾಧಿಕಾರಿ ಮುಸ್ತಫಾ ಕರಿಂಬಿಲ, ಸೆಕ್ಟರ್ ನಾಯಕರಾದ ರಫೀಕ್ ಕರಿಂಬಿಲ, ಇಬ್ರಾಹಿಂ ಕೆ.ಬಿ ಎಣ್ಮೂರು, ಸಾಬಿತ್ ನಿಂತಿಕಲ್ಲು, ಶಿಹಾಬ್ ಕುಕ್ಕಟ್ಟೆ, ಸ್ವಾದಿಕ್ ನೆಕ್ಕಿಲ ಹಾಗೂ ಶಾಖಾ ನಾಯಕರಾದ ರಫೀಕ್ ನಿಂತಿಕಲ್ಲು, ಝಕರಿಯ್ಯ ನಿಂತಿಕಲ್ಲು, ಮುಸ್ತಫಾ ಎಣ್ಮೂರು, ಸೈಫುದ್ದೀನ್ ನೆಕ್ಕಿಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪಂಚಾಯತ್ ಸದಸ್ಯರ ಸಹಕಾರದಿಂದೊಂದಿಗೆ ಪಂಜ ಪಂಚಾಯತ್ ನಲ್ಲಿ ಸಮಾಪ್ತಿಗೊಂಡ ಕಾರ್ಯಕ್ರಮದಲ್ಲಿ ಪಂಚಾಯತ್ ಪ್ರ.ಕಾರ್ಯದರ್ಶಿ ಪದ್ಮಯ್ಯ ಕೆ.ರವರು ಮಾತನಾಡಿ ಶುಭ ಹಾರೈಸಿದರು. 

ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಸಅದಿ ಎಣ್ಮೂರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News