ಎಸ್ಸೆಸ್ಸೆಫ್ ನಿಂದ 'ಕೆರಿಯರ್ ಪ್ಲಸ್' ಶಿಕ್ಷಣ-ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರ

Update: 2021-06-16 06:21 GMT

ಮಂಗಳೂರು, ಜೂ.16: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್) ವತಿಯಿಂದ 'ಕೆರಿಯರ್ ಪ್ಲಸ್' ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರವು ಜೂನ್ 13ರಂದು ಝೂಂ ಹಾಗೂ ಯೂಟ್ಯೂಬ್ ಚಾನೆಲ್ ಮೂಲಕ ನಡೆಯಿತು.

ವೆಸ್ಟ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಾಗಾರವನ್ನು ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ವಿಭಾಗದ ಕಾರ್ಯದರ್ಶಿ ಎನ್.ಸಿ.ರಹೀಂ ಹೊಸ್ಮಾರ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಪ್ರಾಚಾರ್ಯ ಶಹೀನ್ ಅಲಿ ಎಸ್.ಬಿ. ಹಾಗೂ ನಾಸಿರ್ ಮಾಸ್ಟರ್ ಬಜ್ಪೆ ಭಾಗವಹಿಸಿ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ದ‌.ಕ. ಜಿಲ್ಲೆ ವೆಸ್ಟ್ ಪ್ರ.ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ ಹಾಗೂ ವಿಸ್ಡಂ ಕಾರ್ಯದರ್ಶಿ ಸುಹೈಲ್ 10ನೇ ಮೈಲು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ದ.ಕ. ಜಿಲ್ಲೆ ವೆಸ್ಟ್ ಮೀಡಿಯಾ ಕನ್ವೀನರ್ ಸಿದ್ದೀಕ್ ಬಜ್ಪೆ ಸ್ವಾಗತಿಸಿದರು. ಎಸ್ಸೆಸ್ಸೆಫ್ ದ‌.ಕ ಜಿಲ್ಲೆ ವೆಸ್ಟ್ ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News