ದ.ಕ. ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ಗೆ 10 ಮಂದಿ ಬಲಿ, 790 ಮಂದಿಗೆ ಪಾಸಿಟಿವ್

Update: 2021-06-16 15:11 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.16: ದ.ಕ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಇಳಿಕೆಯತ್ತ ಸಾಗಿದ್ದ ಕೊರೋನ ಪಾಸಿಟಿವಿಟಿ ದರ ಇಂದು ಮತ್ತೆ ಸ್ವಲ್ಪ ಏರಿಕೆಯಾಗಿದೆ. ಜತೆಗೆ ದ.ಕ. ಜಿಲ್ಲೆಯಲ್ಲಿ 10 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ998 ಕ್ಕೇರಿದೆ.

ಬುಧವಾರ ಜಿಲ್ಲೆಯಲ್ಲಿ 790 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ 12.72ಕ್ಕೇರಿದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಈ ಸೋಂಕಿಗೊಳಗಾದವರ ಸಂಖ್ಯೆ85,665 ಕ್ಕೇರಿದೆ.

ಬುಧವಾರ 966 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 78,073 ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 6,594 ಸಕ್ರಿಯ ಪ್ರಕರಣಗಳಿವೆ.

ದಂಡ ವಸೂಲಿ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 70,099 ಪ್ರಪ್ರಕರಣಗಳಲ್ಲಿ 84,72,376 ರೂ. ದಂಡ ವಸೂಲು ಮಾಡಲಾಗಿದೆ.

ಬ್ಲ್ಯಾಕ್ ಫಂಗಸ್: 2 ಪ್ರಕರಣಗಳು ಪತ್ತೆ
ದ.ಕ. ಜಿಲ್ಲೆಯಲ್ಲಿ ಬುಧವಾರ ಬ್ಲ್ಯಾಕ್ ಪಂಗಸ್‌ನ 2 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದ.ಕ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಎರಡೂ ಹೊಸ ಪ್ರಕರಣಗಳು ದ.ಕ. ಜಿಲ್ಲೆಗೆ ಸಂಬಂಧಿಸಿದ್ದಾಗಿದೆ.

ಬ್ಲಾಕ್ ಫಂಗಸ್‌ಗೆ ಸಂಬಂಧಿಸಿ ದ.ಕ.ಜಿಲ್ಲೆಯಲ್ಲಿ ಈವರೆಗೆ 16 ಮಂದಿ ಮೃತಪಟ್ಟಿದ್ದು, ಅದರಲ್ಲಿ 2 ಮಂದಿ ದ.ಕ. ಜಿಲ್ಲೆಯವರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಸಕ್ರಿಯ ಬ್ಲಾಕ್ ಫಂಗಸ್ ಪ್ರಕರಣಗಳಲ್ಲಿ 9 ದ.ಕ. ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, 31 ಪ್ರಕರಣಗಳು ಹೊರ ಜಿಲ್ಲೆಯದ್ದಾಗಿದೆ.

ಬುಧವಾರ ಬ್ಲಾಕ್ ಫಂಗಸ್‌ಗೆ ಸಂಬಂಧಿಸಿ ಆಸ್ಪತ್ರೆಯಿಂದ ಯಾರೂ ಬಿಡುಗಡೆಯಾಗಿಲ್ಲ. ಈವರೆಗೆ ಆಸ್ಪತ್ರೆಯಿಂದ 20 ಮಂದಿ ಗುಣಮುಖರಾಗಿ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News