ಕುಂದಾಪುರ: ಅಪಾಯದ ಅಂಚಿನಲ್ಲಿರುವ ಟ್ರಾನ್ಸ್‌ಫಾರ್ಮರ್
Update: 2021-06-16 21:20 IST
ಕುಂದಾಪುರ, ಜೂ.16: ಕುಂದಾಪುರ ವಿನಾಯಕದಿಂದ ಕೋಡಿಗೆ ಹೋಗುವ ಸಂಪರ್ಕ ರಸ್ತೆ ಟಿಟಿ ರೋಡ್ ಕ್ರಾಸ್‌ನಲ್ಲಿರುವ ಬಾವಿಕಟ್ಟೆ ಎಂಬಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಒಂದು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಈ ಟ್ರಾನ್ಸ್‌ಫಾರ್ಮರ್ ರಸ್ತೆಗೆ ಬೀಳುವ ಸಾಧ್ಯತೆ ಕಂಡುಬರುತ್ತಿದೆ.
ಈ ಸಂಪರ್ಕ ರಸ್ತೆಯಲ್ಲಿ ದಿನನಿತ್ಯವೂ ಸಾಕಷ್ಟು ಜನದಟ್ಟಣೆ ಇದ್ದು, ನೂರಾರು ವಾಹನಗಳು ಓಡಾಡುತ್ತವೆ. ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲು ತುಕ್ಕು ಹಿಡಿದು ಶಿಥಿಲಗೊಂಡಿರುವ ಈ ಟ್ರಾನ್ಸ್‌ಫಾರ್ಮರ್‌ನ್ನು ಅತಿ ಶೀಘ್ರದಲ್ಲೇ ಹೊಸ ಕಂಬದೊಂದಿಗೆ ಬದಲಾಯಿಸುವಂತೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರ ಈ ಅವಹಾಲಿಗೆ ಕೂಡಲೇ ಸ್ಪಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.