×
Ad

ಭೂತಾನ್ ನಲ್ಲಿ ದಿಢೀರ್ ಪ್ರವಾಹ: 10 ಸಾವು, ನೇಪಾಳದಲ್ಲಿ 7 ಮಂದಿ ನಾಪತ್ತೆ

Update: 2021-06-16 22:25 IST

photo: twitter/@TRTWorldNow

ಥಿಂಪು (ಭೂತಾನ್), ಜೂ. 16: ಭಾರೀ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹವು ಬುಧವಾರ ಭೂತಾನ್ನ ದೂರದ ಬೆಟ್ಟವೊಂದರಲ್ಲಿ ಸ್ಥಾಪಿಸಲಾಗಿದ್ದ ಶಿಬಿರವೊಂದನ್ನು ಕೊಚ್ಚಿಕೊಂಡು ಹೋಗಿದೆ. ಈ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಔಷಧದಲ್ಲಿ ಬಳಸಲಾಗುವ ಫಂಗಸ್ ‘ಕಾರ್ಡಿಸೆಪ್ಸ್’ ಸಂಗ್ರಹಿಸುತ್ತಿದ್ದ ಭೂತಾನ್ ಗ್ರಾಮಸ್ಥರು ಲಾಯ ಎಂಬಲ್ಲಿ ಶಿಬಿರದಲ್ಲಿ ಮಲಗಿದ್ದರು. ಮಧ್ಯರಾತ್ರಿಯ ಬಳಿಕ ದಿಢೀರ್ ಪ್ರವಾಹದಿಂದ ಅವರ ಶಿಬಿರ ಕೊಚ್ಚಿಕೊಂಡು ಹೋಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತಲುಪಲು ಸಮೀಪದ ರಸ್ತೆಯಿಂದ 11 ಗಂಟೆಗಳ ಕಾಲ ನಡೆಯಬೇಕಾಗಿದೆ. ನೇಪಾಳದಲ್ಲೂ ದಿಢೀರ್ ಪ್ರವಾಹ ಸಂಭವಿಸಿದ್ದು, ಸಿಂಧೂಪಾಲ್ಚೌಕ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಏಳು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News