ತೈಶಾನ್ ಅಣುವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ?: ಸಿಎನ್ಎನ್ ವರದಿ ತಳ್ಳಿಹಾಕಿದ ಚೀನಾ

Update: 2021-06-16 17:11 GMT

photo:twitter/@Resonant_News

ಬೀಜಿಂಗ್,ಜೂ.17: ತೈಶಾನ್ ಅಣುವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿಲ್ಲ ಹಾಗೂ ಸ್ಥಾವರದ ಪರಿಸರದಲ್ಲಿ ವಿಕಿರಣತೆಯ ಅಂಗೀಕಾರಾರ್ಹ ಮಟ್ಟದಲ್ಲಿ ಏರಿಕೆ ಮಾಡಲು ತಾನು ಅನುಮತಿ ನೀಡಿಲ್ಲವೆಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀನಾದ ಅಣುಶಕ್ತಿ ಸುರಕ್ಷತಾ ನಿಯಂತ್ರಣ ಸಂಸ್ಥೆಯು ಈಶಾನ್ಯ ಗುವಾಂಗ್ಡೊಂಗ್ ಪ್ರಾಂತದಲ್ಲಿರುವ ಈ ಅಣುಸ್ಥಾವರವನ್ನು ಮುಚ್ಚುಗಡೆಗೊಳಿಸುವುದನ್ನು ತಪ್ಪಿಸುವ ಸಲುವಾಗಿ ಸ್ಥಾವರದ ಹೊರಗೆ ವಿಕಿರಣತೆಯ ಅಂಗೀಕಾರಾರ್ಹ ಮಿತಿಯನ್ನು ಹೆಚ್ಚಿಸಿದೆಯೆಂದು ಅಣುಸ್ಥಾವರವನ್ನು ವಿನ್ಯಾಸಗೊಳಿಸಿರುವ ಫ್ರೆಂಚ್ ಕಂಪೆನಿ ಫ್ರಾಮಾ ಟೋನ್ ತಿಳಿಸಿರುವುದಾಗಿ ಸಿಎನ್ಎನ್ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿತ್ತು.
 
ಆದರೆ ಸಿಎನ್ಎನ್ ಸುದ್ದಿಸಂಸ್ಥೆಯ ವರದಿ ಪ್ರಮಾದಯುತವಾದುದೆಂದು ಚೀನಾದ ಅಣುಸ್ಥಾವರಗಳ ಸುರಕ್ಷತೆಯ ಉಸ್ತುವಾರಿಯಾದ ಪರಿಸರ ಹಾಗೂ ವಾತಾವರಣ ಇಲಾಖೆ ತಿಳಿಸಿದೆ.
  
ತೈಶಾನ್ ನ ಈ ಸ್ಥಾವರವನ್ನು ತಂಪಾಗಿಸಲು ಬಳಸಲಾಗುವ ನೋಬ್ಲ್ ಅನಿಲಗಳ ಕುರಿತಾದ ವಿವರಗ ಪರಾಮರ್ಶೆ ನಡೆಸಿರುವುದಾಗಿ ರಾಷ್ಟ್ರೀಯ ಅಣು ಸುರಕ್ಷತಾ ಆಡಳಿತ (ಎನ್ಎನ್ಎಸ್ಎ) ತಿಳಿಸಿದೆ. ಆದರೆ ಅಣುಸ್ಥಾವರದ ಹೊರಗಿರುವ ವಿಕಿರಣಶೀಲತೆಯನ್ನು ಪತ್ತೆಹಚ್ಚುವ ವಿಚಾರಕ್ಕೆ ಇದು ಸಂಬಂಧಿಸಿದ್ದಲ್ಲವೆಂದು ಅದು ಸ್ಪಷ್ಟಪಡಿಸಿದೆ.


ತೈಶಾನ್ ಅಣುವಿದ್ಯುತ್ ಸ್ಥಾವರದ ಯೂನಿಟ್ 1 ರಿಯಾಕ್ಟರ್ನ ಪ್ರೈಮರಿ ಸರ್ಕಿಟ್ನಲ್ಲಿ ವಿಕಿರಣದ ಮಟ್ಟವು ಏರಿಕೆಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಆದರೆ ಇದು ಸುರಕ್ಷಿತ ಕಾರ್ಯನಿರ್ವಹಣೆ ಮಾನದಂಡದ ಒಳಗಡೆಯಿದೆಯೆಂದು ಸಚಿವಾಲಯ ತಿಳಿಸಿದೆ.
   
ರಿಯಾಕ್ಟರ್ನಲ್ಲಿನ ಸಣ್ಣ ಸಂಖ್ಯೆಯ ಇಂಧನ ರಾಡ್ ಗಳ ಹೊದಿಕೆಗೆ ಸಣ್ಣ ಮಟ್ಟದ ಹಾನಿಯುಂಟಾಗಿದೆ.ಇಂಧನದ ಉತ್ಪಾದನೆ, ಸಾಗಾಣೆ ಹಾಗೂ ಲೋಡಿಂಗ್ ಸಂದರ್ಭದಲ್ಲಿ ಹೀಗಾಗುವುದು ಸಾಮಾನ್ಯವಾಗಿದೆ. ಆದರೆ ತೈಶಾನ್ ಸ್ಥಾವರದ ಆವರಣದಲ್ಲಿ ವಿಕಿರಣತೆ ಯಾವುದೇ ಅಸಹಜವಾದ ಮಟ್ಟದಲ್ಲಿ ಪತ್ತೆಯಾಗಿಲ್ಲವೆಂದು ಸಚಿವಾಲಯ ‘ವಿಚ್ಯಾಟ್’ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News