ಹಿರಿಯ ಬಂಗಾಳಿ ನಟಿ ಸ್ವಾತಿಲೇಖಾ ಸೇನ್ಗುಪ್ತಾ ನಿಧನ

Update: 2021-06-16 17:31 GMT

ಹೊಸದಿಲ್ಲಿ, ಜೂ. 15: ಹಿರಿಯ ಬಂಗಾಳಿ ನಟಿ ಸ್ವಾತಿಲೇಖಾ ಸೇನ್ ಗುಪ್ತಾ (71) ಹೃದಯಾಘಾತದಿಂದ ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಸ್ವಾತಿಲೇಖ ಸೇನ್ಗುಪ್ತಾ ಅವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದರು. ಅವರು ಕಳೆದ 24 ಗಂಟೆಗಳಿಂದ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಅವರ ಪುತ್ರಿ ಹೇಳಿದ್ದಾರೆ.

ಅವರು ಪತಿ, ರಂಗಭೂಮಿ ಕಲಾವಿದ ರುದ್ರಪ್ರಸಾದ್ ಸೇನ್ಗುಪ್ತಾ, ಪುತ್ರಿ ಸೋಹಿನಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಸೇನ್ಗುಪ್ತಾ ಅವರು ಖ್ಯಾತ ಸಿನೆಮಾ ನಿರ್ದೇಶಕ ಸತ್ಯಜಿತ್ ರೇ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸತ್ಯಜಿತ್ ರೇ ಅವರ ‘ಘೋರೆ ಬೈರೆ’ ಚಿತ್ರದಲ್ಲಿನ ಅವರ ಬಿಮಲಾ ಪಾತ್ರ ಪ್ರಸಿದ್ಧವಾದುದು. ‘‘ನಂದಿಕಾರ್’’ ಥಿಯೇಟರ್ ಗುಂಪಿನ ಮುಖ್ಯಸ್ಥೆಯೂ ಆಗಿರುವ ಸೇನ್ಗುಪ್ತಾ ರಂಗಭೂಮಿ ಕೊಡುಗೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News