ವಿಶ್ವದ ಮೂರನೇ ಅತಿದೊಡ್ಡ ವಜ್ರ ಪತ್ತೆ

Update: 2021-06-17 04:55 GMT
ಫೋಟೊ [Monirul Bhuiyan/AFP]

ಗಾಬೊರೋನ್ (ಬೋಟ್ಸುವಾನ): ವಿಶ್ವದ ಮೂರನೇ ಅತಿದೊಡ್ಡ ವಜ್ರ ಎನ್ನಲಾದ 1098 ಕ್ಯಾರೆಟ್ ತೂಕದ ವಜ್ರದ ಹರಳತ್ತು ಪತ್ತೆ ಮಾಡಿರುವುದಾಗಿ ವಜ್ರ ಸಂಸ್ಥೆ ದೇಬಲ್ವಾನಾ ಪ್ರಕಟಿಸಿದೆ.

ಈ ಅಮೂಲ್ಯ ಹರಳು ಜೂನ್ 1ರಂದು ಪತ್ತೆಯಾಗಿದ್ದು, ಅಧ್ಯಕ್ಷ ಮೊಗ್‍ವೀತ್ಸಿ ಮೈಸಿ ಅವರಿಗೆ ರಾಜಧಾನಿ ಗಾಬೊರೋನ್‍ನಲ್ಲಿ ಪ್ರದರ್ಶಿಸಲಾಗಿದೆ.

"ಬಹುಶಃ ಇದು ವಿಶ್ವದಲ್ಲೇ ಪತ್ತೆಯಾದ ಮೂರನೇ ಅತಿದೊಡ್ಡ ಗಾತ್ರದ ವಜ್ರ" ಎಂದು ದೇಬಸ್ವಾನ ವ್ಯವಸ್ಥಾಪಕ ನಿರ್ದೇಶಕ ಲಿನೆಟ್ ಅರ್ಮ್‍ಸ್ಟ್ರಾಂಗ್ ಹೇಳಿದ್ದಾರೆ.

"ತೀರಾ ಅಪರೂಪದ ಮತ್ತು ಅದ್ಭುತ ಹರಳು. ಇದಕ್ಕೆ ವಜ್ರ ಮತ್ತು ಬೋಟ್ಸುವಾನಾ ಸನ್ನಿವೇಶದಲ್ಲಿ ವಿಶೇಷ ಅರ್ಥವಿದೆ. ಇದು ಸಂಕಷ್ಟದಲ್ಲಿರುವ ದೇಶಕ್ಕೆ ನಿರೀಕ್ಷೆ ಮೂಡಿಸಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ಕಂಪನಿಯ ಇತಿಹಾಸದಲ್ಲೇ ಪತ್ತೆಯಾದ ಅತಿದೊಡ್ಡ ವಜ್ರ ಗುಣಮಟ್ಟದ ಹರಳು ಆಗಿದೆ. ಈ ಕಂಪನಿ ಬೋಟ್ಸುವಾನ ಸರ್ಕಾರ ಮತ್ತು ಜಾಗತಿಕ ವಜ್ರ ಕಂಪನಿಯಾದ ಡೆ ಬೀರ್ಸ್ ನಡುವಿನ ಸಹಭಾಗಿತ್ವದ ಕಂಪನಿ. ವಿಶ್ವದಲ್ಲಿ ಇದುವರೆಗೆ ಪತ್ತೆಯಾಗಿರುವ ಅತಿದೊಡ್ಡದ ವಜ್ರದ ಹರಳು ಕುಲಿನನ್ 3106 ಕ್ಯಾರೆಟ್ ಇದ್ದು, ಇದು 1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಎರಡನೇ ಅತಿದೊಡ್ಡ ವಜ್ರ 1109 ಕ್ಯಾರೆಟ್, ಲೆಸಿಡಿಲಾ ರೋನಾ ಟೆನಿಸ್ ಬಾಲ್ ಗಾತ್ರದ್ದಾಗಿದೆ. ಇದು 2015ರಲ್ಲಿ ಆಗ್ನೇಯ ಬೋಟ್ಸುವಾನಾದ ಕರೋವೆಯಲ್ಲಿ ಪತ್ತೆಯಾಗಿತ್ತು. ಬೋಟ್ಸುವಾನಾ, ಆಫ್ರಿಕಾದ ಅಗ್ರಗಣ್ಯ ವಜ್ರ ಉತ್ಪಾದನೆ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News