ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದಿಂದ ಡಿವೈಎಸ್ಪಿಗೆ ಮನವಿ

Update: 2021-06-17 11:38 GMT

ಕಾರ್ಕಳ : ವಾಹನಗಳಲ್ಲಿ ಅನಧಿಕೃತವಾಗಿ ಮೀಡಿಯಾ ಪ್ರೆಸ್ ಬೋರ್ಡ್ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಕಾರ್ಕಳ ಪೊಲೀಸ್ ಡಿವೈಎಸ್ಪಿ ಅವರಿಗೆ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನವಿ ಮಾಡಲಾಯಿತು.

ದೇಶಾದ್ಯಂತ ಕೋರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಲಾಕ್ಡೌನ್ ಹೇರಲಾಗಿದೆ. ಈ ಸಂದರ್ಭ ಪತ್ರಕರ್ತರನ್ನು ರಾಜ್ಯ ಸರಕಾರ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿದ್ದು, ಮಾಧ್ಯಮ ಮಂದಿಗೆ ಲಾಕ್ಡೌನ್ ಸಂದರ್ಭದಲ್ಲಿಯೂ ತಮ್ಮ ಕೆಲಸಗಳನ್ನು ನಿರ್ವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಅದರೆ ಕೆಲವೊಂದು ವ್ಯಕ್ತಿಗಳು ತಮ್ಮ ವಾಹನದಲ್ಲಿ ಮಾಧ್ಯಮದ ವ್ಯಕ್ತಿಗಳೆಂದು ಎಂದು ಅನಧಿಕೃತ ಬೋರ್ಡುಗಳನ್ನು ಅಳವಡಿಸಿ ತಿರುಗಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲಿಸದೆ ಮಾಧ್ಯಮದ ವ್ಯಕ್ತಿಗಳ ಮೇಲೆ ಕಪ್ಪು ಚುಕ್ಕೆ ತರುವಂತ  ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಅಧಿಕೃತ ಪತ್ರಕರ್ತರಲ್ಲದ ವ್ಯಕ್ತಿಗಳು ಮೀಡಿಯಾ ಅಥವಾ ಪ್ರೆಸ್ ಎಂದು ಬೋರ್ಡ್ ಹಾಕಿ ತಿರುಗುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಡಿವೈಎಸ್ಪಿ ವಿಜಯ್ ಪ್ರಸಾದ್ ರವರಿಗೆ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮದ್ ಶರೀಫ್, ಕಾರ್ಯದರ್ಶಿ ಕೃಷ್ಣ ನಾಯಕ್ , ಜಗದೀಶ್ ಅಂಡರ್ ಗುರುವಾರ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News