×
Ad

ಉಡುಪಿ : ಆಧಾರ್ ದೃಢೀಕರಣ ಸಲ್ಲಿಕೆಗೆ ಮೀನುಗಾರರಲ್ಲಿ ಮನವಿ

Update: 2021-06-17 19:43 IST

ಉಡುಪಿ, ಜೂ.17: ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಶೇ. 2 ಮತ್ತು ಶೂನ್ಯ ಬಡ್ಡಿದರದಲ್ಲಿ 2017-18 ಮತ್ತು 2018-19ರ ಸಾಲಿನಲ್ಲಿ ಪಡೆದ ಸಾಲ ಮರುಪಾವತಿಗೆ ಬಾಕಿ ಇರುವ ಅಸಲು ಮನ್ನಾ ಆದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆಧಾರ್ ಧೃಡೀಕೃತಗೊಂಡು ಆಧಾರ್ ಸಮಸ್ಯೆ ಯಿಂದ ಸಾಲ ಮನ್ನಾದ ಹಣ ಜಮಾಗೊಳ್ಳದ ಬಾಕಿ ಅರ್ಹ ಫಲಾನುಭವಿಗಳಿಗೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ತೆರಳಿ, ತಮ್ಮ ಆಧಾರ್ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಸಲ್ಲಿಸುವಂತೆ ಈ ಹಿಂದೆಯೇ ತಿಳಿಸಲಾಗಿತ್ತು. ಆದರೆ ಇನ್ನೂ ಕೆಲವು ಅರ್ಹ ಫಲಾನುನುಭವಿಗಳ ದೃಢೀಕರಣ ಪತ್ರಗಳು ಅಫ್‌ಲೋಡ್ ಆಗದೇ ಬಾಕಿ ಉಳಿದಿದ್ದು, ಅಂತಹವರು ಕೂಡಲೇ ಆಧಾರ್ ಸ್ವಯಂ ದೃಢೀಕರಣ ಪತ್ರದೊಂದಿಗೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಮೀನುಗಾರಿಕಾ ಇಲಾಖೆಯ ಹಿರಿಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News