ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2021-06-17 21:28 IST
ಮಣಿಪಾಲ, ಜೂ.17: ಮಣಿಪಾಲ ವಿ.ಪಿ ನಗರ ಬಳಿ ಜೂ.14ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಸರಳಬೆಟ್ಟುವಿನ ಪ್ರಣವ್ ಕಾಮತ್ (18) ಹಾಗೂ ಬೀಡಿನಗುಡ್ಡೆ ರಚನ್ ಪೂಜಾರಿ(19) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.