ಅರ್ಜಿ ಆಹ್ವಾನ

Update: 2021-06-17 16:24 GMT

ಮಂಗಳೂರು, ಜೂ.17: ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಚರ್ಚ್ ಕಟ್ಟಡದ ದುರಸ್ಥಿ, ನವೀಕರಣ ಹಾಗೂ ಆವರಣ ಗೋಡೆ ಮತ್ತು ಸ್ಮಶಾನ ಆವರಣ ಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ಚರ್ಚ್ ದುರಸ್ಥಿ ಅಥವಾ ನವೀಕರಣಕ್ಕಾಗಿ ಕನಿಷ್ಠ 10 ಲಕ್ಷದಿಂದ ಗರಿಷ್ಠ 50 ಲಕ್ಷ ರೂ. ಹಾಗೂ ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳಾದ ಆವರಣ ಗೋಡೆ ನಿರ್ಮಾಣ, ವಿದ್ಯುತ್ತೀಕರಣ, ಶುದ್ಧ ಕುಡಿಯುವ ನೀರಿನ ಹಾಗೂ ಕೊಳವೆ ಬಾಇ ಸೌಕರ್ಯ, ಶವ ಇಡುವ ಕಟ್ಟಡ, ರಸ್ತೆ ಇತ್ಯಾದಿ ಗಳಿಗೆ ಅಂದಾಜು ವೆಚ್ಚದ ಶೇ.90 ಅಥವಾ ಗರಿಷ್ಠ 25 ಲಕ್ಷ ರೂ.ವರೆಗೆ ಯಾವುದು ಕಡಿಮೆಯೋ ಅದರಂತೆ ಹಾಗೂ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ತಾಲೂಕು ಕೇಂದ್ರದಲ್ಲಿ ಗರಿಷ್ಠ 50 ಲಕ್ಷ ರೂ. ಹಾಗೂ ಜಿಲ್ಲಾ ಕೇಂದ್ರದಲ್ಲಿ ಗರಿಷ್ಠ 1 ಕೋ.ರೂವರೆಗೆ ಹಾಗೂ ರಾಜ್ಯದಲ್ಲಿರುವ ನಿರ್ಗತಿಕ ವೃದ್ಧರಿಗೆ ಊಟ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಹಾಯಧನ ಹಾಗೂ ಜೈನ ದೇವಾಲಯ (ಬಸದಿಗಳ) ನವೀಕರಣ, ದುರಸ್ಥಿ, ಜೀರ್ಣೋದ್ಧಾರ, ಸುಧಾರಣೆಗಾಗಿ ಗರಿಷ್ಠ 10 ಲ.ರೂ.ವರೆಗೆ ಮಂಜೂರು ಮಾಡಲು ಅವಕಾಶ ನೀಡಲಾಗಿದೆ.

ಈ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿ, ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ ಮಂಗಳೂರು ಅಥವಾ ಇಲಾಖಾ ವೆಬ್‌ಸೈಟ್ (https://dom.karnataka.gov.in)ನಿಂದ ಡೌನ್‌ಲೋಡ್ ಮಾಡಿ ಕೊಳ್ಳುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News